ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದ ಪ್ರಕರಣಗಳಿಗೆ ಸಿಬಿಐ(CBI) ಮುಕ್ತ ಪ್ರವೇಶ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಸಚಿವ ಹೆಚ್.ಡಿ(HDK) ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿಬಿಐ ನಿರ್ಬಂಧಿಸಿದ್ದೀರಿ ಎಂದರೆ ಮುಡಾ ಹಗರಣವನ್ನು ಒಪ್ಪಿಕೊಂಡಂತೆ. ಹಗರಣಗಳಿಂದಾಗಿ ಲೋಕಾಯುಕ್ತ ಸಮಾಧಿ ಮಾಡಿ ಎಸಿಬಿ ರಚನೆ ಮಾಡಿದೀರಿ. ಈಗ ಲೋಕಾಯುಕ್ತವೇ ಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನು ಹೈಕೋರ್ಟ್ ಬರ್ಖಾಸ್ತು ಮಾಡಿತು. ಕರ್ಮ ಹಿಟ್ ಬ್ಯಾಕ್ ಅಂದರೆ ಇದೇ ಅಲ್ಲವೇ ಸಿದ್ದರಾಮಯ್ಯನವರೇ. ಲೋಕಾಯುಕ್ತ(Lokayukta) ಗುರಾಣಿ ಮಾಡಿಕೊಂಡು ಸಿಬಿಐ ಮುಕ್ತ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೀರಿ. ನಾನು ಭಾವಿಸಿದಷ್ಟು ನೀವು ಧೈರ್ಯವಂತರಲ್ಲ. ಸಿದ್ವಿಲಾಸಕ್ಕೆ ಉಘೇ ಉಘೇ ಎನ್ನುಬೇಕು ಎಂದು ವ್ಯಂಗ್ಯವಾಡಿದ್ದಾರೆ.