ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಮತ್ತೊಮ್ಮೆ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ #RAPO22 ಸಿನಿಮಾದಲ್ಲಿ ಉಪ್ಪಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಪ್ಪಿಯನ್ನು ವೆಲ್ ಕಂ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ನಟ ರಾಮ್ ಪೋತಿನೇನಿ ಸಹ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಸೂಪರ್ ಸ್ಟಾರ್ ಉಪೇಂದ್ರ ಅವರು ಸೂರ್ಯಕುಮಾರ್ ಆಗಿದ್ದು, ಅವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇನ್ನೊಂದು ಕಡೆ ತಮಿಳಿನಲ್ಲಿ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.