ಪ್ರಜಾಸ್ತ್ರ ಸುದ್ದಿ
ಅಮರಾವತಿ(Amaravati): ತಿರುಪತಿಗೆ ಹೋಗಿ ವಾಪಸ್ ಆಗುತ್ತಿದ್ದ ಕರ್ನಾಟಕ ಮೂಲದ ವ್ಯಾನ್ ಗೆ ಅಪರಿಚಿತ ವಾಹನವೊಂದು ಸೋಮವಾರ ಮುಂಜಾನೆ ಡಿಕ್ಕೆ ಹೊಡೆದಿದೆ. ಇದರ ಪರಿಣಾಮ ಮೂವರ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ. ಇದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮಂಡಲದ ಚೆನ್ನಮರಿಮಿಟ್ಟಿ ಗ್ರಾಮದ ಹತ್ತಿರ ನಡೆದಿದೆ.
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದವರು ತಿರುಪತಿಗೆ ದರ್ಶನಕ್ಕೆ ಹೋಗಿದ್ದರು. ವಾಪಸ್ ಬರುವಾಗಿ ಅಪಘಾತ ನಡೆದಿದೆ. ಮದನಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.