ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಕೆಲವು ಕಡೆ ಪ್ರಾಣಹಾನಿಯಾಗಿವೆ. ಇನ್ನು ಕೋಟೆನಾಡು ಚಿತ್ರದುರ್ಗದಲ್ಲೂ ವರುಣನ ಅಬ್ಬರವಿದ್ದು, ಮನೆ, ಕಚೇರಿ, ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಹೀಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ರಸ್ತೆಗಳೆಲ್ಲ ಜಲಾವೃತಗೊಂಡಿವೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿದೆ. ಇದರಿಂದಾಗಿ ಪಿಎಸ್ಐ ರೂಮ್, ಕಂಪ್ಯೂಟರ್ ರೂಮ್, ಲಾಕಪ್ ರೂಮ್ ತುಂಬ ನೀರು ತುಂಬಿಕೊಂಡಿದೆ. ಸಿಬ್ಬಂದಿ ನೀರು ಹೊರಹಾಕುವ ಸ್ಥಿತಿ ಬಂದಿದೆ. ಗಜ್ಜುಗಾನಹಳ್ಳಿಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದೆ. ಈ ಮೂಲಕ ದಶಕಗಳ ಕಾಲದ ದಾಖಲೆ ಮುರಿದಿದೆ.