Ad imageAd image

ಇಂಚಗೇರಿ ಮಠಕ್ಕೆ ಹಿರಿಯ ನಟ ದೊಡ್ಡಣ್ಣ ಭೇಟಿ, ಶೀಗಳ ಆಶೀರ್ವಾದ

Nagesh Talawar
ಇಂಚಗೇರಿ ಮಠಕ್ಕೆ ಹಿರಿಯ ನಟ ದೊಡ್ಡಣ್ಣ ಭೇಟಿ, ಶೀಗಳ ಆಶೀರ್ವಾದ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೊರ್ತಿ(Horti): ಅಹಂಕಾರ ಬಿಟ್ಟಾಗ ಆತ್ಮ ಸಾಕ್ಷಾತ್ಕಾರ ವಾಗಲಿದೆ ಎಂದು ಖ್ಯಾತ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ ಹೇಳಿದರು.  ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಭಾವೈಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ನಂತರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮೊಬೈಲ್ ಯಾವನು  ಕಂಡು ಹಿಡಿದನೋ ಏನೋ ಇದು ಬಂದು ಈಗಿನ ಮಕ್ಕಳು ಓದುವುದನ್ನು ಬಿಡಿಸಿದೆ. ಈಗಲೂ ನನ್ನ ಮನೆಯಲ್ಲಿ ಅಪಾರ ಪುಸ್ತಕಗಳು ಇವೆ. ಈಗಲೂ ನಾವಿಬ್ಬರೂ ಪುಸ್ತಕ ಓದುತ್ತೇವೆ. ಆದರೆ ಮುಂದೊಮ್ಮೆ ನಮ್ಮಲ್ಲೇ ಪುಸ್ತಕ ಓದುವ ವ್ಯಕ್ತಿ ಬರಬಹುದು. ದೇವರು ಎಲ್ಲಿಯು ಹೋಗಿಲ್ಲ. ಇಲ್ಲಿಯೇ ನಮ್ಮ ನಿಮ್ಮಲ್ಲೇ ಇದ್ದಾನೆ ಎಂದರು.

ಶ್ರೀಮಠದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರು ಕಾರ್ಯ ಕೈಗೊಂಡ ಸಾಮಾಜಿಕ ಕ್ರಾಂತಿಯ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದಿದ್ದು ತುಂಬಾ ಶ್ಲಾಘನೀಯ ಎಂದು ಶ್ರೀಮಠದ ಕುರಿತು ದೊಡ್ಡಣ್ಣ ಪ್ರಶಂಸಿದರು. ಇದಕ್ಕೂ ಮೊದಲು ಸ್ವಾತಂತ್ರ್ಯ ಸೇನಾನಿ ಮುರುಗೋಡ ಮಹಾದೇವರ ಹಾಗೂ ಭಾವೂಸಾಹೇಬರ, ಗಿರಿಮಲ್ಲೇಶ್ವರ ಮಹಾರಾಜರ ದೇವಸ್ಥಾನಗಳ ಕತೃ ಗದ್ದುಗೆಗಳ ದರ್ಶನ ಪಡೆದರು. ಶ್ರೀಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ನಿರ್ಮಾಪಕ ಮಾಧವಾನಂದ ಶೇಗುಣಸಿ, ನಟ ನಿರ್ದೇಶಕ ಪತ್ರಕರ್ತ ವಿಶ್ವಪ್ರಕಾಶ ಟಿ ಮಲಗೊಂಡ, ಮಲ್ಲಿಕಾರ್ಜುನ ಕಾಲತಿಪ್ಪಿ, ಪ್ರಕಾಶ ಕಾಲತಿಪ್ಪಿ, ಶಂಕ್ರೆಪ್ಪ ಮಹಾರಾಜರು, ಮುಕುಂದ ಮುರುಗೋಡ ಮಹಾರಾಜರು, ನಿರಂಜನ ಹಿರೇಮಠ, ವಿವೇಕಾನಂದ ಅರಳಿ, ರಮೇಶ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.

WhatsApp Group Join Now
Telegram Group Join Now
Share This Article