ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ತಿಮ್ಮಯ್ಯ(92) ಶನಿವಾರ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆ ಇಂದು(ಭಾನುವಾರ) ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಹಿರಿಯ ನಟನ ನಿಧನಕ್ಕೆ ಸ್ಯಾಂಡಲ್ ವುಡ್ ಬಳಗ, ಸಿನಿ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.
ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಅನಂತನಾಗ್ ಸೇರಿದಂತೆ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ವೈದ್ಯ, ವಕೀಲ, ಪೊಲೀಸ್, ಉದ್ಯಮಿ, ಉಪನ್ಯಾಸಕ ಸೇರಿದಂತೆ ಹತ್ತು ಹಲವು ಪಾತ್ರಗಳಲ್ಲಿ ಅಭಿಯನಿಸುವ ಮೂಲಕ ಖ್ಯಾತಿ ಪಡೆದಿದ್ದರು. ಅವರ ಧ್ವನಿಯಿಂದಲೂ ಇದು ನಟ ಟಿ.ತಮ್ಮಯ್ಯನವರೆ ಎಂದು ಹೇಳುವಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದಾರೆ.
ಬಂಧನ, ಬೆಳದಿಂಗಳ ಬಾಲೆ, ಚಲಿಸುವ ಮೋಡಗಳು, ಕಾಮನಬಿಲ್ಲು, ಬೆಂಕಿಯ ಬಲೆ, ಪ್ರತಿಧ್ವನಿ, ಕುರುಕ್ಷೇತ್ರ, ಕರ್ಣ, ಪರಮೇಶಿ ಪ್ರೇಮ ಪ್ರಸಂಗ, ನಿಶ್ಕರ್ಷ, ಜ್ವಾಲಾಮುಖಿ ಸೇರಿದಂತೆ ನೂರಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಗಾಂಭೀರ್ಯದ ಅಭಿನಯವನ್ನು ಮೆಚ್ಚದವರೆ ಇಲ್ಲ. ಇಂತಹ ಹಿರಿಯ ನಟ ಟಿ.ತಿಮ್ಮಯ್ಯ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.