Ad imageAd image

ಹಿರಿಯ ಸಾಹಿತಿ ನಾ.ಡಿಸೋಜಾ ನಿಧನ, ಮಂಗಳವಾರ ಅಂತ್ಯಕ್ರಿಯೆ

Nagesh Talawar
ಹಿರಿಯ ಸಾಹಿತಿ ನಾ.ಡಿಸೋಜಾ ನಿಧನ, ಮಂಗಳವಾರ ಅಂತ್ಯಕ್ರಿಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ(Shivamogga): ಹಿರಿಯ ಸಾಹಿತಿ ನಾ.ಡಿಸೋಜಾ(87) ಅವರು ಭಾನುವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಂಗಳೂರಿನ ಫಾದರ್ ಮಿಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಫಿಲೋಮಿನಾ, ಪುತ್ರಿ ಶೋಭಾ, ಪುತ್ರರಾದ ನವೀನ್ ಡಿಸೋಜಾ, ಸಂತೋಷ್ ಡಿಸೋಜಾ ಅವರನ್ನು ಅಗಲಿದಿದ್ದಾರೆ. ಸಾಗರದ ನೆಹರು ನಗರದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇವರ ನಿಧನಕ್ಕೆ ಸಾಹಿತ್ಯ ವಲಯದ ಸಂಗಾತಿಗಳು, ಶಿಷ್ಯರು, ಅಭಿಮಾನಿಗಳು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ನಾ.ಡಿಸೋಜಾ ಅವರು 75 ಕಾದಂಬರಿಗಳು, 25 ಮಕ್ಕಳ ಕಾದಂಬರಿಗಳು, 9 ಕಥಾ ಸಂಕಲನ, 6 ಚಾರಿತ್ರಿಕ ಕಾದಂಬರಿಗಳು, 2 ಸಮಗ್ರ ಸಂಪುಟಗಳು, 500 ಕಥೆಗಳು ಸೇರಿದಂತೆ ಸಾಹಿತ್ಯ ಪ್ರಕಾರದ ಹಲವು ಮಜಲುಗಳಲ್ಲಿ ಕೃಷಿ ಮಾಡಿದ್ದಾರೆ. ಮುಳುಗಡೆಯ ಊರಿಗೆ ಬಂದವರು ಮಕ್ಕಳ ಕಾದಂಬರಿಗೆ ಕೇಂದ್ರದ ಬಾಲ ಸಾಹಿತ್ಯ ಪುರಸ್ಕಾರ ಬಂದಿದೆ.

2014ರಲ್ಲಿ ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ‘ಮಲೆನಾಡಿಗ’ ಇವರ ಜೀವನಚರಿತ್ರೆ 2012ರಲ್ಲಿ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್, ದ್ವಿತೀಯ ದರ್ಜೆ ಹಾಗೂ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಮಂಗಳವಾರ ಸಂಜೆ 4ಕ್ಕೆ ಸಾಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article