Ad imageAd image

ಪಾಕ್ ಮಣಿಸಿ ಭಾರತ ಹಾಕಿ ತಂಡದ ಗೆಲುವಿನ ಓಟ

Nagesh Talawar
ಪಾಕ್ ಮಣಿಸಿ ಭಾರತ ಹಾಕಿ ತಂಡದ ಗೆಲುವಿನ ಓಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೀನಾ(China): ಹುಲುನ್ ಬುಯಿರ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್(Asian Champions Trophy) ಟ್ರೋಫಿ ಹಾಕಿ ಟೂರ್ನಿಯಲ್ಲಿ ಶನಿವಾರ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಈ ಮೂಲಕ ಗೆಲುವಿನ ಓಟವನ್ನು ಮುಂದುವರೆಸಿದೆ. ನಾಯಕ ಹರ್ಮನ್ ಪ್ರೀತ್ ಸಿಂಗ್ ತಂಡ 2-1 ಗೋಲುಗಳಿಂದ ವಿಜಯ ಸಾಧಿಸಿತು. ನಾಯಕ ಸಿಂಗ್ ಎರಡೂ ಗೋಲುಗಳನ್ನು ಬಾರಿಸಿ ಗೆಲುವಿಗೆ ಕಾರಣರಾದರು.

6 ತಂಡಗಳು ಈ ಟೂರ್ನಿಯಲ್ಲಿವೆ. ಈಗಾಗ್ಲೇ ಸೆಮಿ ಫೈನಲ್ ತಲುಪಿರುವ ಭಾರತ 5 ಪಂದ್ಯಗಳಲ್ಲಿ ಸತತ ಗಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ(Hockey) ತಂಡ ಕಂಚಿನ ಪದಕ ಸಾಧನೆ ಮಾಡಿದೆ.

WhatsApp Group Join Now
Telegram Group Join Now
Share This Article