ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿನ ವಿದ್ಯಾಭಾರತಿ ಪ್ರಥಾಮಿಕ ಶಾಲೆ ಹಾಗೂ ಶ್ರೀ ಮಹಾಂತಲಿಂಗ ಶಿವಾಚಾರ್ಯ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ 22ನೇ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ಫೆಬ್ರವರಿ 6ರ ಸಂಜೆ ಗ್ರಾಮದ ಕಲ್ಯಾಣತಾಯಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಉದ್ಘಾಟಿಸಿದರು.
ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಸೂಪ್ತ ಶಕ್ತಿ ಅಡಗಿರುತ್ತದೆ. ಯಾವ ಮಗು ಕೂಡ ದಡ್ಡಲ್ಲ. ಅದನ್ನು ಹೊರಗೆಳೆಯುವ ಶಕ್ತಿ ಶಿಕ್ಷಕರದಲ್ಲಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಲ್ಲಿ ವಿಧ್ಯಾಭಾರತಿ ಶಾಲೆ ದಾರಿದೀಪವಾಗಿದೆ ಎಂದು ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಾಳಪ್ಪ ಚಿತ್ತಾಪುರ ಅಧ್ಯಕ್ಷತೆ ವಹಿಸಿದ್ದರು. ಮಣೂರು ಎಸ್ ಡಿಎಂಸಿ ಅಧ್ಯಕ್ಷ ಮಲ್ಲಯ್ಯ ನಂದಿಕೋಲ ಫೋಟೋ ಪೂಜೆ ನೆರವೇರಿಸಿದರು. ಜಾಲವಾದ ಕೆಪಿಎಸ್ ಶಾಲೆಯ ಎಸ್ ಡಿಎಂಸಿ ಉಪಾಧ್ಯಕ್ಷ ರಾಜಶೇಖರ ಗುಂಡಗಿ ಜ್ಯೋತಿ ಬೆಳಗಿದರು.
ಸಂಸ್ಥೆಯ ಅಧ್ಯಕ್ಷ ಮಹಾಂತೇಶ ವಡಗೇರಿ, ಜೆ.ಕೆ ಸಜ್ಜನ, ಡಾ.ಸುರೇಶ ಸಜ್ಜನ, ಸಲೀಮ್ ಮುಲ್ಲಾ, ಅಂಬಣ್ಣ ಆನೆಗುಂದಿ, ಎನ್.ಟಿ ಪಾಟೀಲ, ಆರ್.ಎಸ್ ಬಿರಾದಾರ, ಶರಣು ತೊರವಿ, ಬಾಳಪ್ಪ ದೇವೂರ, ಭೋಗೇಶ ಜನಗೊಂಡ, ಭೀಮರಾಯ ಹಂಗನಳಿ, ಧರ್ಮರಾಜ ಪಾಟೀಲ, ಅಮೀನಸಾಬ್ ಇನಾಮಾದರ್, ಖಾದೀರ್ ಮೊಮಿನ್, ಮೌನೇಶ ಬಡಗೇರ, ಕಮಲಾಕರ ದಳವಾಯಿ, ರಮೇಶ ಗುಬ್ಬೇವಾಡ, ಡಾ.ಡಿ.ಎಂ ಉಮದಿ, ಡಾ.ಸಿದ್ದು ಬಯರೋಡಗಿ, ಪಾಲಕ ಪ್ರತಿನಿಧಿ ಶಶಿಧರ ಬುಳ್ಳಾ, ಭೀಮು ಮನಗೂಳಿ, ಶಬ್ಬೀರ್ ಮನಿಯಾರ್, ಕಾಶಿಲಿಂಗ ಮಣೂರ, ಜಗದೀಶ ಚವ್ಹಾಣ, ಮುಖ್ಯಗುರುಗಳಾದ ವಿದ್ಯಾಧರ ಟಕ್ಕಳಕಿ, ಶೋಭಾ ವಡಗೇರಿ, ರೇಣುಕಾ ಟಕ್ಕಳಕಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.




