ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ವಾಮೀಜಿಯೊಬ್ಬರಿಗೆ ಅಶ್ಲೀಲ ವಿಡಿಯೋ, ಫೋಟೋ ಇವೆ ಎಂದು ಹೇಳಿ 6 ಕೋಟಿ ರೂಪಾಯಿಗೆ ಬ್ಲ್ಯಾಕ್ ಮೇಲ್(Blackmail) ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ. ವಿದ್ಯಾ ಬಿರಾದಾರ ಅಲಿಯಾಸ್ ಪಾಟೀಲ ಎನ್ನುವ ಮಹಿಳೆಯನ್ನು ಸಿಸಿಬಿ(CCB) ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ಮಠವೊಂದರ ಸ್ವಾಮೀಜಿಗೆ ವಿಡಿಯೋ, ಫೋಟೋ ಇವೆ ಎಂದು ಹೇಳಿ ಬೆದರಿಕೆ ಹಾಕುತ್ತಿದ್ದಳಂತೆ, ಸ್ವಾಮೀಜಿ ನೀಡಿದ ದೂರಿನ ಮೇರೆಗೆ ವಿದ್ಯಾ ಬಿರಾದಾರ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದ ಮಹಿಳೆ, ತಾನು ಮಹಿಳಾ ಆಯೋಗದ ಅಧ್ಯಕ್ಷ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲರ ಸಹೋದರಿ ಎಂದು ಹೇಳಿಕೊಂಡು ವಂಚನೆಗೆ ಯತ್ನಿಸಿದ್ದಾಳೆ. ಆಗಸ್ಟ್ 31ರಂದು ಫೋನ್ ಮಾಡಿ, ಸೂರ್ಯನಾರಾಯಣ ಹಾಗೂ ಡಿ.ಬಿ ಪಲ್ಲವಿ ಎಂಬುವರು ವಿಡಿಯೋ ಬಗ್ಗೆ ದೂರು ಸಲ್ಲಿಸಿದ್ದಾರೆ ಅಂತಾ ಹೇಳಿದ್ದಾಳೆ. ಪದೆಪದೆ ಫೋನ್ ಮಾಡಿ ಕಿರುಕುಳ ನೀಡಿದ್ದಾಳೆ. ಆಗ ಸ್ವಾಮೀಜಿ(Swamiji) ಬೆಂಗಳೂರಲ್ಲಿರುವ ತಮ್ಮ ಕಾನೂನು ಸಲಹೆಗಾರ ವಕೀಲರನ್ನು ಭೇಟಿಯಾಗಲು ಹೇಳಿದ್ದಾರೆ.
ವಕೀಲರನ್ನು ಭೇಟಿಯಾದ ಮಹಿಳೆ ವಿಡಿಯೋ, ಫೋಟೋ(Video, Photo) ಸಮೇತ ದೂರು ಸಲ್ಲಿಸಿದ್ದಾರೆ. ಇದು ಬಹಿರಂಗವಾಗಬಾರದು ಎಂದರೆ 6 ಕೋಟಿ ರೂಪಾಯಿ ಕೊಡಬೇಕು. ಈಗ 50 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಬೇಕು ಎಂದಿದ್ದಾಳೆ. ಹೀಗಾಗಿ ಸ್ವಾಮೀಜಿ ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಗ ವಿದ್ಯಾ ಬಿರಾದಾರಳನ್ನು ಬಂಧಿಸಿದ್ದಾರೆ. ಸೂರ್ಯನಾರಾಯಣ, ಡಿ.ಬಿ ಪಲ್ಲವಿ ವಿರುದ್ಧವೂ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.