Ad imageAd image

ವಿಜಯಪುರ: 100 ಲೀಟರ್ ಕಳ್ಳಭಟ್ಟಿ, ಗಾಂಜಾ ವಶ

Nagesh Talawar
ವಿಜಯಪುರ: 100 ಲೀಟರ್ ಕಳ್ಳಭಟ್ಟಿ, ಗಾಂಜಾ ವಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ನಗರದಲ್ಲಿ ಶನಿವಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಸುಮಾರು 100 ಲೀಟರ್ ಕಳ್ಳಭಟ್ಟಿ ಹಾಗೂ ಅರ್ಧ ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಸುಮಾರು 25 ಮನೆಗಳಲ್ಲಿ ಶೋಧ ನಡೆಸಿ 56 ಬಾಟಲ್ ಗಳಲ್ಲಿ ತುಂಬಿಸಿಟ್ಟದ್ದ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ. ಸಿಪಿಐ ಮಲ್ಲಯ್ಯ ಮಠಪತಿ, ಪ್ರದೀಪ್ ತಳಕೇರಿ, ರಮೇಶ ಅವಜಿ ನೇತೃತ್ವದ ತಂಡ ದಾಳಿ ನಡೆಸಿದೆ.

ಜಲನಗರ, ಆದರ್ಶನಗರ, ಗೋಳಗುಮ್ಮಟ, ಗಾಂಧಿಚೌಕ್  ಹಾಗೂ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ವಾಸು ಚೌಹಾಣ, ಆನಂದ ಚೌಹಾಣ, ರಿಯಾಜ್ ನರಸಲಗಿ ಅನ್ನೋ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article