Ad imageAd image

ವಿಜಯಪುರ: 110 ಸಿಲಿಂಡರ್ ಜಪ್ತಿ, 19 ಪ್ರಕರಣ ದಾಖಲು

Nagesh Talawar
ವಿಜಯಪುರ: 110 ಸಿಲಿಂಡರ್ ಜಪ್ತಿ, 19 ಪ್ರಕರಣ ದಾಖಲು
Chennai, Tamil Nadu, India - February 20 2021: LPG Gas cylinders for home distribution in a truck. LPG gas used for domestic cooking
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ (ಸಾಂದರ್ಭಿಕ ಚಿತ್ರ)

ವಿಜಯಪುರ(Vijayapura): ನಗರದಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಗಳನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿರುವ ಸ್ಥಳಗಳಿಗೆ ದಾಳಿ ನಡೆಸಿ 2024ರ ನವೆಂಬರ್ ತಿಂಗಳಿನಿಂದ ಈವರೆಗೆ ಒಟ್ಟು 110 ಸಿಲಿಂಡರ್‌ ಗಳನ್ನು ಜಪ್ತಿ ಮಾಡಿ 19 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ತಿಳಿಸಿದ್ದಾರೆ.

ನಗರದಾದ್ಯಂತ ಅನಧಿಕೃತವಾಗಿ ಆಟೋಗಳಿಗೆ, ಹೋಟೆಲ್‌ಗಳು, ಬೀದಿ ಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಸೇರಿದಂತೆ ವಾಣಿಜ್ಯೋದ್ಯಮ ಸಿಲಿಂಡರುಗಳಿಗೆ ಗೃಹ ಬಳಕೆ ಗ್ಯಾಸ್ ಮರು ಭರ್ತಿ ಮಾಡಿ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.

ಅನಧಿಕೃತವಾಗಿ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವುದು ಹಾಗೂ ವಾಣಿಜ್ಯೋದ್ಯಮ ಸಿಲಿಂಡರ್‌ಗಳಿಗೆ ಮರು ಭರ್ತಿ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾಯ್ದೆ ಉಲ್ಲಂಘನೆ ಮೇರೆಗೆ ಸಿಲಿಂಡರ್‌ಗಳನ್ನು ಜಪ್ತಿ ಮಾಡುವುದಲ್ಲದೇ ಅಗತ್ಯ ವಸ್ತುಗಳ ಕಾಯ್ದೆ 1955ರ ಸೆಕ್ಷನ್ 3/7ರನ್ವಯ ಕ್ರಿಮಿನಲ್ ಮೂಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article