Ad imageAd image

ವಿಜಯಪುರ: 85.60 ಕೋಟಿ ರೂಪಾಯಿ ಬೆಳೆ ವಿಮೆ

Nagesh Talawar
ವಿಜಯಪುರ: 85.60 ಕೋಟಿ ರೂಪಾಯಿ ಬೆಳೆ ವಿಮೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ(Pradhan Mantri Fasal Bima Yojana) ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಮಾನ ವೈಪರೀತ್ಯದಿಂದ ಹಾನಿಯಾದ ಬೆಳೆಗಳಿಗೆ 85.60 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಅಂತಿಮಗೊಳಿಸಲಾಗುತ್ತಿದೆ. ಮುದ್ದೇಬಿಹಾಳ-120.99, ನಿಡಗುಂದಿ-01.94, ಸಿಂದಗಿ-05.14, ತಾಳಿಕೋಟಿ-974.6, ದೇವರಹಿಪ್ಪರಗಿ-223.06, ಇಂಡಿ-06.97, ಆಲಮೇಲ-08.07, ಬಬಲೇಶ್ವರ-45.25, ಬಸವನಬಾಗೇವಾಡಿ-01.68, ವಿಜಯಪುರ-14.23,  ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ(Crop Insurance )14.13 ಕೋಟಿ ರೂಪಾಯಿ ಜಮೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಳಿದಂತೆ ಅಂದಾಜು ರೂಪಾಯಿ 71.47 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುವುದು. ಆದ ಕಾರಣ ವಿಮೆ ತುಂಬಿದ ರೈತರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾದ ಬಗ್ಗೆ ಖಾತರಿವಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article