ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾರು ಅಪಘಾತವಾಗಿ ಸ್ಥಳದಲ್ಲಿಯೇ ಮೂವರು ಮೃತಪಟ್ಟ ಘಟನೆ ತಾಲೂಕಿನ ಕನ್ನಾಳ ಕ್ರಾಸ್ ಹತ್ತಿರ ಶುಕ್ರವಾರ ಮುಂಜಾನೆ ನಡೆದಿದೆ. ರಾಜು ಬಿರಾದಾರ(23), ಅಭಿಷೇಕ್ ಸಾವಂತ್(23) ಹಾಗೂ ವಿಜಯಕುಮಾರ್ ಔರಂಗಾಬಾದ್(24) ಎನ್ನುವ ಮೂವರು ಯುವಕರು ಮೃತಪಟ್ಟಿದ್ದಾರೆ. ಪೋಳ ಹಾಗೂ ರಾಜು ಕಾಂಬಳೆ ಎನ್ನುವ ಇಬ್ಬರು ಗಾಯಗೊಂಡಿದ್ದಾರೆ.
ಕನ್ನಾಳ ಕ್ರಾಸ್ ಹತ್ತಿರದ ಎನ್ಎಚ್-50 ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಸೋಲಾಪುರಕ್ಕೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಘಟನೆ ನಡೆದಿದೆ.