ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರೈತರಿಗೆ ಸರಿಯಾಗಿ ಯೂರಿಯಾ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಸಹಾಯ ಮಾಡುವುದನ್ನು ಬಿಟ್ಟು, ಬೇರೆ ಮಳಿಗೆಗಳಿಗೆ ಗೊಬ್ಬರ ಪೂರೈಕೆ ಮಾಡಿ ಹೆಚ್ಚಿನ ಬೆಲೆಯ ಮಾರಾಟದಲ್ಲಿ ಜಂಟಿ ಕೃಷಿ ನಿರ್ದೇಶಕರು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಗೆ ಜಂಟಿ ಕೃಷಿ ನಿರ್ದೇಶಕ ಶಿವಣಗೌಡ ಎಸ್.ಪಾಟೀಲ ವಿರುದ್ಧ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ ಕೆಂಬೋಗಿ ಮಾತನಾಡಿ, ನ್ಯಾಯುತವಾದ ಗೊಬ್ಬರ ಮಳಿಗಳಿಗೆ ಗೊಬ್ಬರ ಪೂರೈಕೆ ಮಾಡದೆ ಬೇರೆ ಮಳಿಗಳಿಗೆ ಪೂರೈಕೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರೊಂದಿಗೆ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಬಂದಿದೆ. ಇದನ್ನು ಜಂಟಿ ಕೃಷಿ ಅಧಿಕಾರಿ ಶಿವಣಗೌಡ ಅವರಿಗೆ ಫೋನ್ ಮಾಡಿದರೆ ದರ್ಪದಿಂದ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳೆ ಚೆನ್ನಾಗಿ ಬಂದಿದೆ ಎಂದು ಖುಷಿಯಲ್ಲಿದ್ದ ರೈತರಿಗೆ ಅತಿವೃಷ್ಟಿಯಿಂದ ನಷ್ಟವಾಗಿದೆ. ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ವೇಳೆ ತಮ್ಮಾರಾಯ ಆಸಂಗಿ, ಮಲ್ಲಿಕಾರ್ಜುನ ನಾವದಗಿ, ಶ್ರೀಧರ ಚವ್ಹಾಣ, ಬಸನಗೌಡ ಪಾಟೀಲ, ಗಿರಿಮಲ್ಲ ಮಸಳಿ, ಮಲಕಪ್ಪ ನಾವದಗಿ, ಹಣಮಂತ ರಜಪೂತ, ಬಸು ಕೈರಾಟ, ರೇವಣಸಿದ್ದ ಕನ್ನೂರ, ನಾಗೇಶ ಕೈರಾಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.