ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರೈತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಬಂಡಿ ದಾರಿ ರಸ್ತೆ ಸುಧಾರಣೆ ಹಾದಿ ಸಮಸ್ಯೆ, ಕಬ್ಬಿನ ವೈಜ್ಞಾನಿಕ ಬಂಬಲ ಬೆಲೆ, ರಾತ್ರಿ ಹೊತ್ತು ವಿದ್ಯುತ್, ತೋಟದ ಲೈನನ್ನು ರಾತ್ರಿ ನಿರಂತರ ವಿದ್ಯುತ್ ನೀಡಬೇಕು, ಅಕ್ರಮ-ಸಕ್ರಮ ಯೋಜನೆ ಪುನಾ ಜಾರಿಗೆ ತರುವುದು ಹಳೆಯ ಆರ್ ಆರ್ ನಂಬರ್ 10 ಸಾವಿರ ರೂಪಾಯಿ ಮತ್ತು ಹೊಸ ಆರ್ ಆರ್ ನಂಬರ್ 15 ಸಾವಿರ ರೂಪಾಯಿ ಶುಲ್ಕ ಪಾವತಿಸುವ ಆದೇಶ ಹಿಂಪಡೇಯಬೇಕು ಎಂದು ಹೇಳಿದರು.
ರಾಜ್ಯ ಗೌರವಾಧ್ಯಕ್ಷ ಸಿದ್ರಾಮ ಜಂಗಮಶೇಟ್ಟಿ, ಜಿಲ್ಲಾಗೌರವಾಧ್ಯಕ್ಷ ಬಾಪುಗೌಡ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಗುರಣ್ಣಗೌಡ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ ಹಿರೇಮಠ, ಸರಸ್ವತಿ ಬಿರಾದಾರ, ವಾಣಿಶ್ರೀ ಮುಳವಾಡ, ನಗರ ಘಟಕದ ಅಧ್ಯಕ್ಷ ದಾದಾಪೀರ ಮುಜಾವರ, ರೈತ ಚಿಂತಕರಾದ ಫಯಾಜ ಕಲಾದಗಿ, ತಿಕೋಟ ತಾಲೂಕಿನ ಅಧ್ಯಕ್ಷ ಈರಪ್ಪ ಕನ್ನಾಳ, ದೇವರಹಿಪ್ಪರಗಿಯ ತಾಲೂಕು ಅಧ್ಯಕ್ಷ ರಾಮು ದೇಸಾಯಿ, ಸಿಂದಗಿ ತಾಲ್ಲೂಕಾಧ್ಯಕ್ಷ ದಶರಥಸಿಂಗ ರಜಪೂತ, ಆಲಮೇಲ ತಾಲೂಕಿನ ಅಧ್ಯಕ್ಷ ಮಹೀಬೂಬಸಾಬ ಸೌದಾಗರ, ತೋರವಿ ಗ್ರಾಮ ಘಟಕ ಅಧ್ಯಕ್ಷ ದಸ್ತಗಿರ ಶ್ಯಾನವಾಲೆ, ಮುಳಸಾವಳಗಿ ಗ್ರಾಮ ಘಟಕದ ಅಧ್ಯಕ್ಷ ಶರಣಗೌಡ ಬಿರಾದಾರ, ತೋರವಿ ರೈತ ಮುಖಂಡರಾದ ಬೀರಪ್ಪ ಜುಮನಾಳ, ಬಸುಗೌಡ ಹೋನುಟಗಿ, ಗುಂಡು ಮಾಟಗಾರ, ಫಾರೂಕ ಇಮ್ಮಾರತವಾಲೆ, ಇಲಾಸ ಕುಮಟಿ, ಬಲಭೀಮ ಪಾರ್ಸನಳ್ಳಿ, ಅಶೋಕ ಗುತ್ತೆದಾರ, ಯಲ್ಲಾಲಿಂಗ ನಾಲತ್ವಾಡ, ಶೀವು ಯಾಳಗಿ, ನರೇಂದ್ರ ಇಂಡಿ, ಗುರು ಜಡಗೊಂಡ, ರಾವುತ ಅಗಸರ, ರಮೇಶ ಇಳಗೇರ ಮುಂತಾದವರು ಇದ್ದರು.