Ad imageAd image

ವಿಜಯಪುರ: ತುರ್ತು ದುರಸ್ತಿ ಕಾರ್ಯ-ನೀರು ಪೂರೈಕೆಯಲ್ಲಿ ವ್ಯತ್ಯಯ

Nagesh Talawar
ವಿಜಯಪುರ: ತುರ್ತು ದುರಸ್ತಿ ಕಾರ್ಯ-ನೀರು ಪೂರೈಕೆಯಲ್ಲಿ ವ್ಯತ್ಯಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಮುಳವಾಡ ಮಧ್ಯಂತರ ಪಂಪಿನ ಮನೆಯಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ 965/900 ಎಂಎಂ ವ್ಯಾಸದ ಎಂಎಸ್-ಪಿಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ್ 34 ಕಿಲೋ ಮೀಟರ್, ಕೋರಿ ಹಳ್ಳದ ಹತ್ತಿರ ಮತ್ತು ಚೈನೇಜ್ 41.300 ಕಿಲೋ ಮೀಟರ್ ಬಾರಾಕೋಟ್ರಿ ತಾಂಡಾ ಹತ್ತಿರ 900 ಮಿ.ಮೀ ವ್ಯಾಸದ ಪಿ.ಎಸ್.ಸಿ ಕೊಳವೆ ಮಾರ್ಗವು ಎರಡು ಕಡೆ ಮೇ-26ರಂದು ಸ್ಫೋಟವಾಗಿದೆ. ಆದ್ದರಿಂದ ಜಲಮಂಡಳಿ ವತಿಯಿಂದ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮೇ 27ರಂದು ವಿಜಯಪುರ ನಗರಕ್ಕೆ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

WhatsApp Group Join Now
Telegram Group Join Now
Share This Article