Ad imageAd image

ವಿಜಯಪುರ: ಮೊಟ್ಟ ಮೊದಲ ಬಾರಿಗೆ ತಾಯಿ ಹಾಲು ಸಂಗ್ರಹಣ ಕೇಂದ್ರ

ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ

Nagesh Talawar
ವಿಜಯಪುರ: ಮೊಟ್ಟ ಮೊದಲ ಬಾರಿಗೆ ತಾಯಿ ಹಾಲು ಸಂಗ್ರಹಣ ಕೇಂದ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲು ಹೈದ್ರಾಬಾದ್‌ನ ಸುಶೇನಾ ಹೆಲ್ಥ್ ಫೌಂಡೇಶನ್ ಹಾಗೂ ಜಿಲ್ಲಾ ಆಸ್ಪತ್ರೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ತಿಳಿಸಿದ್ದಾರೆ. ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಸಮ್ಮುಖದಲ್ಲಿ ವಿಜಯಪುರದ ಜಿಲ್ಲಾ ಆಸ್ಪತ್ರೆಯ ಚಿಕ್ಕ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪನೆಗೆ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ತಾಯಿ ಹಾಲು ಸಂಗ್ರಹಣ ಕೇಂದ್ರವು Comprehensive Lactation Management Unit (Mother Milk Bank ) ತಾಯಿಯ ಎದೆ ಹಾಲನ್ನು ಪಡೆದು ನಿಯಮಗಳು ಷರತ್ತಿಗಳನ್ವಯ ಹಾಗೂ ಒಂದು ನಿಗದಿತ ಪ್ರಕ್ರಿಯಲ್ಲಿ ನ್ಯಾಷನಲ್ ಹೆಲ್ತ್ ಮಿಷನನ ನಿಯಮಗಳನ್ವಯ ಹಾಲನ್ನು ಸಂಗ್ರಹಿಸಲಾಗುತ್ತದೆ. ನವಜಾತ ಶಿಶುವಿನಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ಹಾಲಿನಿಂದ NECAಯನ್ನು ತಡೆಗಟ್ಟುವುದು, ಹಾಲು ಪಚನ ಕ್ರೀಯೆಯಲ್ಲಿ ಯಾವುದೇ ತೊಂದರೆ ಇದ್ದರೆ, ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಅವಧಿ ಪೂರ್ವ ನವಜಾತ ಶಿಶುಗಳಲ್ಲಿ–ಮರಣ ಪ್ರಮಾಣವನ್ನು ಕಡಿಮೆ ಮಾಡಲು ಅತ್ಯಂತ ಸಹಕಾರಿಯಾಗಿದೆ. ವೆಚ್ಚವಿಲ್ಲದೆಯೆ, ನವಜಾತ ಶಿಶುಗಳಲ್ಲಿ ತೂಕ ಹೆಚ್ಚಿಸುವುದು ಮತ್ತು ಅಪೌಷ್ಠಿಕತೆಯನ್ನು ನಿಯಂತ್ರಿಸಲಿದೆ. ಹೀಗೆ ಸಂಗ್ರಹಿಸಲಾದ ಹಾಲನ್ನು ನವಾಜಾತ ಶಿಶುಗಳಿಗೆ ತುಂಬಾ ಉಪಯುಕ್ತವಾಗಿದ್ದು, ಕಡಿಮೆ ತೂಕದ ಶಿಶುಗಳು ಜನಿಸಿದಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾದ ನವಜಾತ ಶಿಶುಗಳಿಗೆ, ತಾಯಿಯರಿಗೆ ಹಾಲು ಬಾರದೇ ಇರುವ ಸಂದರ್ಭದಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ಶಿಶುವಿಗೆ ತಾಯಿ ಹಾಲು ಉಣಿಸುವ ಉದ್ದೇಶ ಹೊಂದಿರುತ್ತದೆ. ಇದರಿಂದ ಶಿಶುಗಳನ್ನು ಸದೃಡವಾಗಿ ಬೆಳೆಸುವ ಗುರಿಯನ್ನು ಹೊಂದಲಾಗಿದೆ.

ಪರಸ್ಪರ ಸಹಿ ಹಾಕುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಹೈದ್ರಾಬಾದ್‌ನ  ಸುಶೇನಾ ಹೆಲ್ತ್  ಫೌಂಡೇಶನ್ (SHF) ಎನ್‌ಜಿಓ ಜನರಲ್ ಸೆಕ್ರೇಟರಿ ಡಾ.ಸಂತೋಷಕುಮಾರ ಕಾರ್ಲೇಟಿ, ಹೈದ್ರಾಬಾದ್‌ನ ಯುನಿಸೆಫ್ ಹೆಲ್ತ ಸ್ಪೇಶಾಲಿಸ್ಟ್  ಡಾ.ಶ್ರೀಧರ ರ‍್ಯಾವಂಕಿ, ಡಾ.ಚಂದು ರಾಠೋಡ,  ಡಾ.ಸುರೇಶ ಚವ್ಹಾಣ, ಡಾ.ಅನೀಲ ರಾಠೋಡ, ಡಾ.ಸುನೀಲ ರೂಡಗಿ, ಡಾ.ಶೈಲಶ್ರೀ, ಡಾ.ಸುಧೀರ ಚವ್ಹಾಣ, ಡಾ.ಅಕ್ಕಿ, ಡಾ.ಪವನ ಹಾಗೂ ರಮೇಶ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article