ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ವಶಕ್ಕೆ ಪಡೆಯಲಾಗಿದೆ. ಒಟ್ಟು 210 ಕ್ವಿಂಟಲ್ 43 ಕೆಜಿ ಅಕ್ಕಿಯಿದ್ದು, 4,76,310 ರೂಪಾಯಿ ಮೌಲ್ಯದ ಪಡಿತರ ಧಾನ್ಯ ಜಪ್ತಿ ಮಾಡಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ 1955ರ ಮೇರೆಗೆ ಆದರ್ಶನಗರ ಪೋಲಿಸ್ ಠಾಣೆಯಲ್ಲಿ ಗಜಾನನ ಮಕಾಲೆ ಅನ್ನೋ ವ್ಯಕ್ತಿ ವಿರುದ್ಧ ದೂರು ದಾಖಲಿಸಲಾಗಿದೆ.
ಈ ದಾಳಿಯಲ್ಲಿ ವಿಜಯಪುರ ನಗರದ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಆದರ್ಶನಗರ ಪಿಎಸ್‌ಐ ಸೀತಾರಾಮ ಲಮಾಣಿ ಸೇರಿದಂತೆ ಪೋಲಿಸ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ ತಿಳಿಸಿದ್ದಾರೆ.