ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿನ ಎಸ್ ಬಿಐ ಬ್ಯಾಂಕ್ ದರೋಡೆ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ ಚಿನ್ನವಿದ್ದ ಬ್ಯಾಗ್, ನಗದು ಪತ್ತೆಯಾಗಿದೆ. ಮಹಾರಾಷ್ಟ್ರದ ಹುಲಿಜಂತಿ ಗ್ರಾಮದ ಮನೆಯೊಂದರ ಮೇಲೆ ಚಿನ್ನವಿದ್ದು ಬ್ಯಾಗ್ ಪತ್ತೆಯಾಗಿದೆ.
ಸೆಪ್ಟೆಂಬರ್ 16ರ ಸಂಜೆ ಬ್ಯಾಂಕ್ ವ್ಯವಹಾರ ಮುಗಿದ ಬಳಿಕ ಮೂವರು ಮುಸುಕುಧಾರಿಗಳು ಸಿಬ್ಬಂದಿಗೆ ಗನ್, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದರು. ಅವರನ್ನು ಕಟ್ಟಿ ಹಾಕಿ 21 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇದೀಗ ಚಿನ್ನವಿದ್ದು ಬ್ಯಾಗ್ ಪತ್ತೆಯಾಗಿದೆ. ಒಂದಿಷ್ಟು ನಗದು ಸಹ ಸಿಕ್ಕಿದೆ. ಎಷ್ಟು ಪ್ರಮಾಣದಲ್ಲಿ ಚಿನ್ನ, ನಗದು ಸಿಕ್ಕಿದೆ ಅನ್ನೋದು ಪೊಲೀಸ್ ಅಧಿಕಾರಿಗಳು ತಿಳಿಸಬೇಕಿದೆ.