ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯ, ಮೂಢನಂಬಿಕೆ ಇನ್ನು ಎಷ್ಟೊಂದು ಉಳಿದುಕೊಂಡಿದೆ ಅನ್ನೋದಕ್ಕೆ ಗುಮ್ಮಟನಗರಿಯಲ್ಲೊಂದು ಘಟನೆ ನಡೆದಿದೆ. ಹೆಂಡ್ತಿ ಮೂರು ಹೆಣ್ಮಕ್ಕಳನ್ನು ಹೆತ್ತಿದ್ದಾಳೆ. ಗಂಡು ಮಗು ಹೆತ್ತಿಲ್ಲವೆಂದು ಮಾಟಗಾತಿಯ ಮಾತು ಕೇಳಿದ ಗಂಡ ಹಾಗೂ ಆತನ ಮನೆಯವರು, ಆಕೆಯ ತಲೆ ಕೂದಲು ಕತ್ತರಿಸಿ ಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ಹೊನ್ನುಟಗಿಯಲ್ಲಿ ಈ ಘಟನೆ ನಡೆದಿದೆ. ದುಂಡೇಶ ಎಂಬಾತ ಈ ರೀತಿ ನಡೆದುಕೊಂಡು ಮಹಿಳೆ ಕಣ್ಣೀರು ಇಡುತ್ತಿದ್ದಾಳೆ. ನಿನ್ನ ಹೆಂಡ್ತಿ ಮೈಯಲ್ಲಿ ದೆವ್ವ ಇದೆ. ಹೀಗಾಗಿ ಗಂಡು ಮಕ್ಕಳು ಆಗುತ್ತಿಲ್ಲ. ಆಕೆಯ ನೆತ್ತಿಯ ಕೂದಲನ್ನು ರಕ್ತ ಬರುವಂತೆ ಕಿತ್ತಿ ಸ್ಮಶಾನದಲ್ಲಿ ಸುಡಬೇಕು ಎಂದು ಹೇಳಿದ್ದು, ಅದರಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




