ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕುಖ್ಯಾತ ರೌಡಿ ಭಾಗಪ್ಪ ಹರಿಜನ ಹತ್ಯೆ(Murder) ಮಾಡಲಾಗಿದೆ. ಮಂಗಳವಾರ ರಾತ್ರಿ ನಗರದ ರೇಡಿಯೋ ಕೇಂದ್ರದ ಹತ್ತಿರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ ಸುಮಾರು 10 ಗಂಟೆಯ ವೇಳೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಆತನ ಮನೆಯ ಹತ್ತಿರವೇ ಸುಮಾರು 20 ಜನರ ತಂಡ ದಾಳಿ ಮಾಡಿ ಮುಖ, ತಲೆ ಸೇರಿದಂತೆ ವಿವಿಧ ಕಡೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗಪ್ಪ ಹರಿಜನ ಭಾಗಿಯಾಗಿದ್ದ. ಇತನ ಮೇಲೆ ಹಲವು ಪ್ರಕರಣಗಳಿವೆ. ಈ ಭಾಗದ ಕುಖ್ಯಾತ ರೌಡಿಯಾಗಿದ್ದ ಚಂದಪ್ಪ ಹರಿಜನ ಸೋದರ ಸಂಬಂಧಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಬಂಧನಕ್ಕಾಗಿ ಎಎಸ್ ಪಿ ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. 2023ರಲ್ಲಿ ಕೋರ್ಟ್ ಆವರಣದಲ್ಲಿಯೇ ಇತನ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂಡಲೇ ಬಿಎಲ್ ಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಗ ಬದುಕುಳಿದ್ದಿದ್ದ.
ಇದೀಗ ಸುಮಾರು 20 ಜನರ ತಂಡ ನಿಯೋಜಿತ ದಾಳಿ ಮಾಡಿ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ. ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ. ಇಷ್ಟೊಂದು ಭೀಕರ ಹತ್ಯೆಯ ಹಿಂದಿನ ಉದ್ದೇಶ ಏನು ಅನ್ನೋದು ಸೇರಿದಂತೆ ಹಲವು ಹಂತಗಳಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ಬಂಧನವಾಗಿ ತನಿಖೆಯ ಬಳಿಕ ಸತ್ಯ ಹೊರ ಬರಲಿದೆ.