ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕೆಲವೊಂದು ಕ್ಷೇತ್ರಗಳಲ್ಲಿ ರಜೆ ಪಡೆಯುವುದು ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಇದರಿಂದಾಗಿ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾ ಜೀವ, ಜೀವನ ಹಾಳು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಪೊಲೀಸ್, ವೈದ್ಯಕೀಯ ಸೇರಿ ತುರ್ತು ಸೇವೆಗಳ ಇಲಾಖೆಗಳಲ್ಲಿ ಕೆಳ ಹಂತದ ಸಿಬ್ಬಂದಿ ರಜೆ ಪಡೆಯಲು ಹರಸಾಹಸ ಪಡಬೇಕು. ಹೀಗೆ ರಜೆ ಸಿಗದೆ ಮಗನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಆಗದೆ ಮಗುವನ್ನು ಕಳೆದುಕೊಂಡೆ ಎಂದು ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ವಾಟ್ಸಪ್ ನಲ್ಲಿ ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿದೆ.
ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್ ಟೇಬಲ್ ಎ.ಎಸ್ ಬಂದುಗೋಳ ಎಂಬುವರು ತಮ್ಮ ನೋವಿನ ಸಂದೇಶವನ್ನು ಪೊಲೀಸ್ ವಾಟ್ಸಪ್ ಗ್ರೂಪ್ ನಲ್ಲಿ ಆಸ್ಪತ್ರೆಯ ಫೋಟೋ ಸಮೇತ ಹಾಕಿದ್ದಾರೆ. ಇದು ಈಗ ವೈರಲ್ ಆಗಿದೆ. ಮಗು ಕಳೆದುಕೊಂಡ ಪೊಲೀಸನ ಪರಿಸ್ಥಿತಿ ಕಂಡು ಜನರು ಮರಗುತ್ತಿದ್ದಾರೆ. ಏನಿದು ಘಟನೆ? ಮಗುವಿಗೆ ಏನಾಗಿತ್ತು? ಇವರಿಗೆ ರಜೆ ಯಾಕೆ ಸಿಗಲಿಲ್ಲ ಅನ್ನೋದು ಸೇರಿ ಅನೇಕ ವಿಚಾರಗಳ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.