ಪ್ರಜಾಸ್ತ್ರ ಸುದ್ದಿ
ಬೆಂಗಳೂರು:(Bengaloru) ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ ಹಾಗೂ ಡಿ.ಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಇದೇ ಟೀಂ ಕೆಲಸ ಮಾಡಿದೆ. ಅಪ್ಪ, ಮಕ್ಕಳ ಹೊಂದಾಣಿಕೆ ರಾಜಕಾರಣ ತಡೆಯುತ್ತೇನೆ ಎಂದಿದ್ದಾರೆ.
ಬೆಂಬಲಿಗರು ಹೊಸ ಪಕ್ಷದ ಬಗ್ಗೆ ಹೇಳುತ್ತಿದ್ದಾರೆ. ಆದರೆ, ನಾನು ಎಲ್ಲಿಯೂ ಹೋಗುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ. ಇಲ್ಲಿ ಇದ್ದು ಹೊಂದಾಣಿಕೆ ರಾಜಕಾರಣ ತಡೆಯುತ್ತೇನೆ. ಬಿಜೆಪಿಯ ಹಿಂದುತ್ವದ ಸಿದ್ಧಾಂತದಂತೆ ಕೆಲಸ ಮಾಡಲಾಗುವುದು. ಇಲ್ಲಿದ್ದು ಅದನ್ನು ರಿಪೇರಿ ಮಾಡುತ್ತೇನೆ. ಯಾವುದೇ ಪಕ್ಷಕ್ಕೂ ಹೋಗಲ್ಲ, ಹೊಸ ಪಕ್ಷ ಸ್ಥಾಪನೆ ಸಹ ಇಲ್ಲ. ಉಚ್ಛಾಟನೆಯನ್ನು ಮರುಪರಿಶೀಲಿಸಿ ಎಂದು ನಾನು ದೆಹಲಿಗೂ ಸಹ ಹೋಗುವುದಿಲ್ಲ ಎಂದು ಹೇಳಿದ್ದಾರೆ.