ಪ್ರಜಾಸ್ತ್ರ ಸುದ್ದಿ
ಯಲ್ಲಾಪುರ(Yallapura): ಸರ್ಕಾರದ ವಿರುದ್ಧ ಬಿಜೆಪಿಯಿಂದ ಜನಾಕ್ರೋಶ ಯಾತ್ರೆಯನ್ನು ಕೈಗೊಳ್ಳಲಾಗಿದ್ದು, ಒಂದೊಂದು ಭಾಗದಿಂದಲೂ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಶುಕ್ರವಾರ ಯಲ್ಲಾಪುರದಿಂದ ಯಾತ್ರೆ ಶುರುವಾಗಿದೆ. ಯಾತ್ರೆಗೂ ಮೊದಲು ಗ್ರಾಮದೇವಿ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸರ್ಕಾರದ ದುರಾಡಳಿತ, ಸಿಎಂ ಕುರ್ಚಿ ಅಲ್ಲಾಡುವ ವಿಚಾರ ಚರ್ಚೆಗೆ ಬಂದಾಗ ಜಾತಿಗಣತಿ ಮುನ್ನಲೆಗೆ ಬರುತ್ತೆ ಎಂದು ಕಿಡಿ ಕಾರಿದ್ದಾರೆ.
ಜನರು ನಿತ್ಯ ಬಳಸುವ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಹಾಲಿನಿಂದ ಕಸದ ತನಕ ಬೆಲೆ ಏರಿಕೆಯಾಗಿದೆ. ಇದರಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಬಿಜೆಪಿ ಯಾತ್ರೆಯ ಬಿಸಿ ಸರ್ಕಾರಕ್ಕೆ ತಟ್ಟಿದೆ. ಹೀಗಾಗಿಯೇ ಏಪ್ರಿಲ್ 17ರಂದು ಕೇಂದ್ರದ ವಿರುದ್ಧ ಡಿ.ಕೆ ಶಿವಕುಮಾರ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ ಅಂತಾ ಹೇಳಿದರು.