ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಾರು ಹಾಗೂ ಕಬ್ಬು ಕಟಾವು ಮಾಡುವ ಲಾರಿ ನಡುವೆ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ ಐವರು ಮೃತಪಟ್ಟ ದಾರುಣ ಘಟನೆ ನಡೆದಿದೆ. ತಾಳಿಕೋಟೆಯ ಬಿಳೆಬಾವಿ ಕ್ರಾಸ್ ಈ ಒಂದು ದುರಂತ ನಡೆದಿದೆ. ಮೂವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಮೃತರು ವಿಜಯಪುರ ಜಿಲ್ಲೆಯ ಅಲಿಯಾಬಾದ್ ನಿವಾಸಿಗೆಳೆಂದು ಹೇಳಲಾಗುತ್ತಿದೆ. ಹುಣಸಗಿಯಿಂದ ತಾಳಿಕೋಟೆಯತ್ತ ಬರುತ್ತಿದ್ದ ಕಬ್ಬು ಕಟಾವು ಲಾರಿ ಹಾಗೂ ಎದುರಿಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.