ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರ ಹೆಸರುಗಳನ್ನು ಗ್ರಾಮ ಪಂಚಾಯತಿಯ ಕ್ಷೇತ್ರವಾರು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಿಸಿದ್ದಾರೆ. ನಿಡಗುಂದಿ ತಾಲೂಕಿನ ಆಲಮಟ್ಟಿ ಪಂಚಾಯತಿಯ ಅರಳದಿನ್ನಿ ಕ್ಷೇತ್ರಕ್ಕೆ (ಅನುಸೂಚಿತ ಜಾತಿ) ನಿಜವ್ವ ಪರಸಪ್ಪ ಮಾದರ, ಚಿಮ್ಮಲಗಿ ಪು.ಕೆ. ಕ್ಷೇತ್ರದಿಂದ (ಅನುಸೂಚಿತ ಜಾತಿ) ಸೀತವ್ವ ಹಣಮಂತ ಭಜಂತ್ರಿ ಅವರು ಆಯ್ಕೆಯಾಗಿದ್ದಾರೆ.
ಇಂಡಿ ತಾಲೂಕಿನ ಸಾಲೋಟಗಿ ಕ್ಷೇತ್ರದಿಂದ (ಸಾಮಾನ್ಯ ಮಹಿಳೆ) ಸಾವಿತ್ರಿ ರಾವುತರಾಯ ಬಗಲಿ ಹಾಗೂ ಖೇಡಗಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ (ಮಹಿಳೆ)) ಪ್ರಿಯಾಂಕ ಈ.ವಾಲಿಕಾರ, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯತಿಯ ನಾಗರಾಳಹುಲಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಬ (ಮಹಿಳೆ)) ಸರೋಜಿನಿ ನಿಂಗಣ್ಣ ಹೇರಾನವರ, ಮುತ್ತಗಿ ಕ್ಷೇತ್ರದಿಂದ (ಸಾಮಾನ್ಯ) ಶಾಂತವ್ವ ಬ.ದೇವಣಗಾಂವಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಾಯವಾಡಗಿ ಕ್ಷೇತ್ರದಿಂದ (ಅನುಸೂಚಿತ ಜಾತಿ) ಬಸಪ್ಪ ಮರೆಪ್ಪ ಚಲವಾದಿ ಅವರು ಆಯ್ಕೆಯಾಗಿದ್ದಾರೆ.
ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮ ಪಂಚಾಯತಿಯ ಕಾತ್ರಾಳ ಕ್ಷೇತ್ರದಿಂದ (ಹಿಂದುಳಿದ ವರ್ಗ ಬ) ಮಲ್ಲಯ್ಯ ಕಾಡಯ್ಯ ಮಠಪತಿ, ವಿಜಯಪುರ ತಾಲೂಕಿನ ಕನ್ನೂರ ಕ್ಷೇತ್ರದಿಂದ (ಸಾಮಾನ್ಯ) ಈಸಾಕಸಾಬ ಬುಡನಸಾಬ ಜಮಾದಾರ, ನಾಗಠಾಣ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ) ನಂದಾ ಸಿದ್ದಪ್ಪ ಕತ್ನಳ್ಳಿ, ಜುಮನಾಳ ಕ್ಷೇತ್ರದಿಂದ (ಸಾಮಾನ್ಯ) ಹಣಮಂತ ಶ್ರೀಶೈಲ ಸಾಹೇಬಗೊಂಡ ಹಾಗೂ ಹೊನಗನಹಳ್ಳಿ ಕ್ಷೇತ್ರದಿಂದ (ಸಾಮಾನ್ಯ) ಮಾರತಪ್ಪ ಭೀಮಪ್ಪ ದಿನ್ನಿ ಅವರು ಆಯ್ಕೆಯಾಗಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಕ್ಷೇತ್ರದಿಂದ ಹಿಂದುಳಿದ ವರ್ಗ-ಬ (ಮಹಿಳೆ) ಶಾಂತಾ ವಿರೇಶ ಮದರಿ, ತಾಳಿಕೋಟೆ ತಾಲೂಕಿನ ಹಿರೂರ ಪಂಚಾಯತಿಯ ತಮದಡ್ಡಿ ಕ್ಷೇತ್ರದಿಂದ (ಸಾಮಾನ್ಯ (ಮಹಿಳೆ)) ಅನ್ನಪೂರ್ಣ ಬಸವರಾಜ ಕನಕರಡ್ಡಿ, ಚಡಚಣ ತಾಲೂಕಿನ ಲೋಣಿ ಬಿ.ಕೆ.ಕ್ಷೇತ್ರದಿಂದ (ಸಾಮಾನ್ಯ (ಮಹಿಳೆ)) ಸುಧಾರಾಣಿ ಅಶೋಕ ಮಾಳಾಬಗಿ ಹಾಗೂ ಹತ್ತಳ್ಳಿ ಕ್ಷೇತ್ರದಿಂದ (ಹಿಂದುಳಿದ ವರ್ಗ ಅ (ಮಹಿಳೆ)) ಭವರಮ್ಮ ಧರೆಪ್ಪ ಬಿರಾದಾರ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.