ಪ್ರಜಾಸ್ತ್ರ ಸುದ್ದಿ
ಪಣಜಿ(Panaji): ಗೋವಾ ಹಾಗೂ ಕರ್ವಾ ಕರಾವಳಿಯಲ್ಲಿ ಇರುವ ಐಎನ್ಎಸ್ ವಿಕ್ರಾಂತ್ ಸಶಸ್ತ್ರ ನೌಕಾಪಡೆಯ ಸಿಬ್ಬಂದಿಯೊಂದಿಗೆ ಪ್ರಧಾನಿ ಮೋದಿ ದೀಪಾವಳಿಯನ್ನು ಆಚರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ, ಕೆಲವು ತಿಂಗಳ ಹಿಂದೆ ವಿಕ್ರಾಂತ್ ತನ್ನ ಹೆಸರಿನ ಮೂಲಕ ಪಾಕಿಸ್ತಾನಕ್ಕೆ ನಿದ್ರೆ ಇಲ್ಲದ ರಾತ್ರಿಗಳನ್ನು ನೀಡಿತು. ಇದು ದೇಶದಲ್ಲಿ ಬೆಳೆಯುತ್ತಿರುವ ಕಡಲ ಶಕ್ತಿಯನ್ನು ತೋರಿಸುತ್ತದೆ ಎಂದರು.
ಐಎನ್ಎಸ್ ವಿಕ್ರಾಂತ್ ಬರೀ ಸೇನೆಯ ಪರಾಕ್ರಮದ ಸಂಕೇತವಲ್ಲ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ತಾಂತ್ರಿಕ ಪಗ್ರತಿಯನ್ನು ಪ್ರತಿನಿಧಿಸುತ್ತದೆ. ನೌಕಾಪಡೆಗೆ ಇದರ ಸೇರ್ಪಡೆ ಒಂದು ಮೈಲುಗಲ್ಲು. ಇದರಿಂದ ಭಾರತದ ಕಡಲ ಭದ್ರತೆ ಹಾಗೂ ಹಿಂದೂ ಮಹಾಸಾಗರದಲ್ಲಿ ಪ್ರಭಾವವನ್ನು ಹೆಚ್ಚಿಸುತ್ತದೆ ಅಂತಾ ಹೇಳಿದರು.