ಪ್ರಜಾಸ್ತ್ರ ಸುದ್ದಿ
ನವದೆಹಲಿ(Neh delhi): ಪ್ಯಾರಿಸ್ ಒಲಿಂಪಿಕ್ಸ್-2024 ಟೂರ್ನಿಯಲ್ಲಿ ಭಾರತದ ಮಹಿಳಾ ಕುಸ್ತಿಪುಟ ವಿನೀಶಾ ಫೋಗೆಟ್(Vinesh Phogat) ಫೈನಲ್ ಗೆ ಬಂದು, ಇನ್ನೇನು ಚಿನ್ನದ ಪದಕಕ್ಕೆ ಕೊರಳೊಡ್ಡುವ ಕ್ಷಣವನ್ನು ಎಲ್ಲರು ಕಣ್ತುಂಬಿಕೊಳ್ಳಬೇಕು ಎನ್ನುವಷ್ಟರಲ್ಲಿ 100 ಗ್ರಾಂ ತೂಕ ಹೆಚ್ಚಿಗಿದೆ ಎಂದು ಅನರ್ಹಗೊಳಿಸಲಾಗಿದೆ. ಈ ಮೂಲಕ ಕೋಟ್ಯಾಂತರ ಭಾರತೀಯ ಹೃದಯ ಘಾಸಿಗೊಳಿಸಲಾಗಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ವಿನೀಶಾ ಫೋಗೆಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ.
50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್ ಗೆ ಬಂದಿದ್ದರು. ಭಾರತೀಯ ಒಲಿಂಫಿಕ್ಸ್ ಇತಿಹಾಸದಲ್ಲಿ ಇದೊಂದು ಸಾಧನೆಯಾಗಿತ್ತು. ಚಿನ್ನ ಅಥವ ಬೆಳ್ಳಿ ಯಾವುದನ್ನೇ ಗೆದ್ದಿದ್ದರೂ ಐತಿಹಾಸಿಕ ದಾಖಲೆಯೇ ಆಗುತ್ತಿತ್ತು. ಆದರೆ, ಅನರ್ಹತೆಯಿಂದ ನೊಂದಿರುವ ವಿನೀಶಾ, ಕುಸ್ತಿಗೆ(wrestling)ನಿವೃತ್ತಿ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ವಿರುದ್ಧ ಕುಸ್ತಿ ಗೆದ್ದಿದೆ. ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ. ನಿಮ್ಮ ಕನಸು ಮತ್ತು ನನ್ನ ಧೈರ್ಯ ನುಚ್ಚುನೂರಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿಯಿಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮ್ಮಲ್ಲರಿಗೂ ನಾನು ಆಭಾರಿ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ಕ್ರೀಡಾ ನ್ಯಾಯ ಮಂಡಳಿಗೆ ವಿನೀಶಾ ತಮ್ಮ ಅನರ್ಹತೆ ಪ್ರಶ್ನಿಸಿ ಮನವಿ ಸಲ್ಲಿಸಿದ್ದಾರೆ. ಕೊನೆಯ ಪಕ್ಷ ಜಂಟಿಯಾಗಿ ಬೆಳ್ಳಿ ಪದಕ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ತಿಳಿಸಿದೆ.