ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಎನ್ನುವ ಕಾರಣದಿಂದ 50 ಕೆಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡ ಭಾರತದ ಮಹಿಳಾ ಕುಸ್ತಿಪಟು ವಿನೀಶಾ ಫೋಗೆಟ್(Vinesh phogat), ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ಎರಡು ಮನವಿಗಳಲ್ಲಿ ಒಂದು ತಿರಸ್ಕರಿಸಲಾಗಿದೆ. ಇನ್ನೊಂದು ಶುಕ್ರವಾರ ಮುಂಜಾನೆ 11.30ರ ಸುಮಾರಿಗೆ ತಿಳಿಯಲಿದೆ.
ಮತ್ತೊಮ್ಮೆ ತೂಕ ಮಾಡಿ ಆಡಲು ಅವಕಾಶ ನೀಡಬೇಕು ಎನ್ನುವ ಮನವಿಯನ್ನು ಸಿಎಎಸ್(CAS) ತಿರಸ್ಕರಿಸಿದೆ. ವಿನೀಶಾ ಬೆಳ್ಳಿ ಪದಕಕ್ಕೆ ಅರ್ಹಳು. ಆಕೆ ಆ ದಿನವನ್ನೇ ಗಳಿಸಿದ್ದಿಳು ಮತ್ತು ಅವರ ತೂಕ ಉತ್ತಮವಾಗಿತ್ತು ಎಂದು ಹೇಳಲಾಗಿದೆ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನೀಡುವ ತೀರ್ಪಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಬದ್ಧವಾಗಿರಬೇಕು ಎಂದು ಹೇಳಲಾಗಿದೆಯಂತೆ.
ಈ ಘಟನೆಯನ್ನು ಟೊಕಿಯೋ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಖಂಡಿಸಿದ್ದಾರೆ. ನೀನು ಸೋತಿಲ್ಲ. ನಿನ್ನನ್ನು ಸೋಲಿಸಲಾಗಿದೆ ಎಂದು ಪೂನಿಯಾ ಹೇಳಿದ್ದಾರೆ. ಇದು ಇಡೀ ದೇಶಕ್ಕೆ ಆದ ಸೋಲು. ಓರ್ವ ಕ್ರೀಡಾಪಟುವಾಗಿ ನಿಮ್ಮ ಹೋರಾಟಕ್ಕೆ ಸೆಲ್ಯೂಟ್ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ವಿನೀಶಾ ಅನರ್ಹವೆಂದು ತಿಳಿಯುತ್ತಿದ್ದಂತೆ ಅಮೆರಿಕಾದ ಎದುರಾಳಿ ಹಿಲ್ಡೆಬ್ರಾಂಡ್ ತನಗೆ ಚಿನ್ನ ಖಚಿತವೆಂದು ಸಂಭ್ರಮಿಸಲು ಸಿದ್ಧವಾಗಿದ್ದರು. ಆದರೆ, ಅದನ್ನು ತಡೆದು ವಿನೀಶಾ ಎದುರು ಸೆಮಿ ಫೈನಲ್ ನಲ್ಲಿ ಸೋತ ಕ್ಯೂಬಾದ ಗುಜ್ಮನ್ ಲೋಪೆಜ್ ವಿರುದ್ಧ ಆಡಬೇಕು ಎಂದು ಹೇಳಲಾಯಿತು. ಹೀಗಾಗಿ ಗುಜ್ಮನ್ ಕಂಚಿನ ಪದಕಕ್ಕಾಗಿ ಹೋರಾಡಬೇಕಿದ್ದವಳು ಬೆಳ್ಳಿಗೆ ಬಂದಳು. ಫೈನಲ್ ಪಂದ್ಯದಲ್ಲಿ ಹಿಲ್ಡೆಬ್ರಾಂಡ್ 3-0ದಿಂದ ಜಯ ಸಾಧಿಸಿ ಚಿನ್ನ ಗೆದ್ದರು. ಶುಕ್ರವಾರ ವಿನೀಶಾ ಪರ ತೀರ್ಪು ಬಂದರೆ ಗುಜ್ಮನ್ ಜೊತೆ ಬೆಳ್ಳಿ ಪದಕ ಹಂಚಿಕೊಳ್ಳಬಹುದು.