ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್-2024ರ ಟೂರ್ನಿಯಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಪಂದ್ಯವಾಳಿಯಲ್ಲಿ ಭಾರತದ ವಿನೀಶಾ ಫೋಗೆಟ್(vinesh phogat) ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಎಲ್ಲರೂ ಚಿನ್ನದ ಪದಕಕ್ಕೆ ಕೊರಳೊಡ್ಡಲಿದ್ದಾರೆ ಎಂದು ಕಾಯುತ್ತಿರುವ ಹೊತ್ತಿನಲ್ಲಿಯೇ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ವಿನೀಶಾ ಫೋಗೆಟ್ ಫೈನಲ್ ರೇಸ್ ನಿಂದ ಅನರ್ಹಗೊಳಿಸಲಾಗಿದೆಯಂತೆ.
ಅವರ ತೂಕದಲ್ಲಿ 100 ಗ್ರಾಂ ಹೆಚ್ಚಳವಾಗಿದ್ದು, ಇದರಿಂದ ಫೈನಲ್ ನಿಂದ ಅನರ್ಹಗೊಳಿಸಲಾಗಿದೆ(disqualified) ಎಂದು ಇಂಡಿಯನ್ ಒಲಿಂಪಿಕ್ಸ್ ಅಸೊಶಿಯೇಷನ್ ತಿಳಿಸಿದೆ. ಇಂದು ರಾತ್ರಿ ಅಮೆರಿಕಾದ ಸೆರಾ ಹಿಲ್ಡಿಬ್ರೇಟ್ ಅವರನ್ನು ಎದುರಿಸಬೇಕಿತ್ತು. ಈ ಘಟನೆ ಬಳಿಕ ಸಾಕಷ್ಟು ಅನುಮಾನಗಳು ಮೂಡಲು ಶುರು ಮಾಡಿವೆ. ಇದರ ಹಿಂದೆ ಏನೋ ನಡೆದಿದೆ ಎನ್ನುವ ಶಂಕೆ ಜನರಲ್ಲಿ ಮೂಡುತ್ತಿದೆ. ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಸಾಧನೆಗೆ ತಣ್ಣೀರು ಎರಿಚಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ.
ಭಾರತದ ಕುಸ್ತಿ ಫೆಡೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ವರ್ಷ ಲೈಂಗಿಕ ದೌರ್ಜನ್ಯ ಆರೋಪದಡಿ ನಡೆದ ಪ್ರತಿಭಟನೆಯಲ್ಲಿ ವಿನೀಶಾ ಫೋಗೆಟ್ ಪ್ರಮುಖ ಪಾತ್ರವಹಿಸಿದ್ದರು. ತಿಂಗಳುಗಳ ಕಾಲ ನಡೆದ ಹೋರಾಟದಲ್ಲಿ ಸಾಕಷ್ಟು ನೋವು, ಅವಮಾನ, ಟೀಕೆಗಳನ್ನು ಎದುರಿಸಿದ್ದರು. ಕುಸ್ತಿಪಟು ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ಸಹೋದರಿರು, ಕುಸ್ತಿಪಟುಗಳಾದ ಗೀತಾ, ಬಬಿತಾ ಸೇರಿ ಇತರರು ಬೆಂಬಲಿಸಿದ್ದರು.