ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ(Vinod Kambli) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂತ್ರ ಸೋಂಕು ಸೇರಿ ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಚಿಕಿತ್ಸೆ ನೀಡುತ್ತಿರುವ ಆಕೃತಿ ಆಸ್ಪತ್ರೆಯ ಡಾ.ವಿವೇಕ್ ತ್ರಿವೇದಿ, ಕಾಂಬ್ಳಿ ಅವರಿಗೆ ಜೀವನಪೂರ್ತಿ ಚಿಕಿತ್ಸೆ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯ ಉಸ್ತುವಾರಿ ಎಸ್.ಸಿಂಗ್ ಉಚಿತ ಚಿಕಿತ್ಸೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ಮುಂದೆ ಈ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ಸಿಂಗ್ ಅವರ ನಿರ್ಧಾರದಿಂದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಆಸ್ಪತ್ರೆಗೆ ದಾಖಲೆಯಾದಾಗ ಹಲವು ರೀತಿಯಲ್ಲಿ ಪರೀಕ್ಷಿಸಲಾಗಿದೆ. ಸಧ್ಯ ಐಸಿಯುನಲ್ಲಿದ್ದು ಆರೋಗ್ಯ ಸ್ಥಿರವಾಗಿದೆ. ವೈದ್ಯರು ಹೇಳಿರುವುದನ್ನು ಸರಿಯಾಗಿ ಅವರು ಪಾಲಿಸಬೇಕು ಎಂದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿನ್ ತಂಡೂಲ್ಕರ್ ಅವರನ್ನು ಗುರುತಿಸಿಲು ಕೆಲ ನಿಮಿಷಯಗಳನ್ನು ಕಾಂಬ್ಳಿ ತೆಗೆದುಕೊಂಡರು. ಅಲ್ಲಿಂದ ಅವರ ಆರೋಗ್ಯದ(Health Issue) ಕುರಿತು ಸಾಕಷ್ಟು ಚರ್ಚೆಗಳು ಶುರುವಾದವು. ಅವರ ಕ್ರಿಕೆಟ್ ಬದುಕಿನ ಬಗ್ಗೆಯೂ ಚರ್ಚೆಯಾಯಿತು. 1989ರ ವಿಶ್ವಕಪ್ ತಂಡ ಕಾಂಬ್ಳಿ ಆರೋಗ್ಯದ ಜವಾಬ್ದಾರಿ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಈಗ ಆಕೃತಿ ಆಸ್ಪತ್ರೆಯೇ ಉಚಿತ ಚಿಕಿತ್ಸೆಯನ್ನು ಘೋಷಿಸಿದೆ.