ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಸ್ಯಾಂಡಲ್ ವುಡ್ ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಪೂಜೆ ಸಲ್ಲಿಸಿದರು. ಉದ್ಭೂರ್ ಗೇಟ್ ಹತ್ತಿರ ಇರುವ ಸ್ಮಾರಕ್ಕೆ ಭೇಟಿ ನೀಡಿದ ಪತ್ನಿ ಭಾರತಿ ವಿಷ್ಣುರ್ವಧನ್, ಮಗಳು ಕೀರ್ತಿ, ಅಳಿಯ ಅನಿರುದ್ಧ್ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.
ಇಲ್ಲಿ ನಿರ್ಮಿಸಲಾಗಿರುವ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಭಾರತಿ ವಿಷ್ಣುವರ್ಧನ್ ಅವರು, ಈ ವರ್ಷ ತುಂಬಾ ವಿಶೇಷವಾಗಿದ್ದು, ನಿಮ್ಮೆಲ್ಲರ ಬೇಡಿಕೆಯಂತೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಸರ್ಕಾರಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಸಂಭ್ರಮ ನೋಡಿ ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದರು.
ಇನ್ನು ವಿಷ್ಣು 75ನೇ ಹುಟ್ಟು ಹಬ್ಬವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದರು. ಆದರೆ, ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ನಟ ಬಾಲಣ್ಣ ಕುಟುಂಬಸ್ಥರು ಇತ್ತೀಚೆಗೆ ನೆಲಸಮ ಮಾಡುವ ಮೂಲಕ ಅವಮಾನಿಸಲಾಗಿದೆ. ಹೀಗಾಗಿ ನಟ ಕಿಚ್ಚ ಸುದೀಪ್ ಪ್ರತ್ಯೇಕ ಜಾಗ ಖರೀದಿಸಿದ್ದು ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಾರೆ.