ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮತಕಳ್ಳತನ ಪ್ರಕರಣಕ್ಕೆ ಸಂಬಂಧಸಿದಂತೆ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬ್ರೆಜಿಲ್ ಮಾಡೆಲ್ ವೊಬ್ಬರು 22 ಬಾರಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದರೆ ಬ್ರೆಜಿಲ್ ಮಾಡೆಲ್ ವೊಬ್ಬರ ಫೋಟ್ ಬಳಸಿಕೊಂಡು ಬೇರೆ ಬೇರೆ ಹೆಸರಿನಲ್ಲಿ ಮತ ಹಾಕಲಾಗಿದೆ ಎಂದಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಕ್ರೀನ್ ಮೇಲೆ ಇರುವ ಮಹಿಳೆ ಯಾರು ಅನ್ನೋ ಪ್ರಶ್ನೆಯಾರ್ಥಕದ ಮೂಲಕ ಮಾಹಿತಿ ನೀಡಿದರು. ಆಕೆಯ ಹೆಸರು ಏನು, ಎಲ್ಲಿಂದ ಬಂದಿದ್ದಾಳೆ? ಆದರೆ, ಸರಸ್ವತಿ, ರಶ್ಮಿ, ಸ್ವೀಟಿ, ಸೀಮಾ, ಸುನಿತಾ, ಶೀಮಾ ಹೀಗೆ ಬೇರೆ ಬೇರೆ ಹೆಸರುಗಳಿಂದ 22 ಬಾರಿ ಮತದಾನ ಮಾಡಿದ್ದು, ವಾಸ್ತವಾಗಿ ಈಕೆ ಬ್ರೆಜಿಲ್ ಮಾಡೆಲ್ ಎಂದು ಹೇಳಿದ್ದಾರೆ. ಮತಕಳ್ಳತನದ ಮೂಲಕ ಕಾಂಗ್ರೆಸ್ ಗೆಲುವನ್ನು ಸೋಲಾಗಿ ಪರಿವರ್ತಿಸಲಾಗಿರುವುದು ನಮಗೆ ತಿಳಿದಿದೆ ಎಂದರು.




