ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತದಾನ ಬುಧವಾರ ಮುಂಜಾನೆ 7 ಗಂಟೆಗೆ ಶುರುವಾಗಿದೆ. ಮಹಾರಾಷ್ಟ್ರದ 288 ಹಾಗೂ ಜಾರ್ಖಂಡ್ ನ 38 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸಾರ್ವಜನಿಕರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದರ ಜೊತೆಗೆ ದೇಶದ ವಿವಿಧ ರಾಜ್ಯಗಳ 15 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುತ್ತಿದೆ. ಸಂಜೆ 6 ಗಂಟೆಯ ತನಕ ವೋಟ್ ಮಾಡಲಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ 288 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ. ಜಾರ್ಖಂಡ್ ನಲ್ಲಿ 38 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 23ರಂದು ಈ ಎರಡೂ ರಾಜ್ಯಗಳ ಫಲಿತಾಂಶದ ಜೊತೆಗೆ ದೇಶದ ವಿವಿಧ ರಾಜ್ಯಗಳ 46 ವಿಧಾನಸಭೆ ಹಾಗೂ 2 ಲೋಕಸಭೆಯ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಇದರಲ್ಲಿ ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳಿವೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್ ಸಿಪಿ(ಶರದ್ ಪವಾರ್ ಬಣ), ಶಿವಸೇನೆ(ಉದ್ಧವ್ ಠಾಕ್ರೆ ಬಣ) ನಡುವೆ ಹೊಂದಾಣಿಕೆಯಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ 75 ಕಡೆ ನೇರ ಸ್ಪರ್ಧೆಯಿದೆ. ಇನ್ನು ಬಿಜೆಪಿ, ಶಿವಸೇನೆ(ಏಕನಾಥ್ ಶಿಂಧೆ ಬಣ), ಎನ್ ಸಿಪಿ(ಅಜಿತ್ ಪವಾರ್ ಬಣ) ಸೇರಿ ಇತರೆ ಮಿತ್ರಪಕ್ಷಗಳ ನಡುವೆ ಮೈತ್ರಿಯಿದೆ.