Ad imageAd image

ವೃಕ್ಷಥಾನ್ ಹೆರಿಟೇಜ್: ಗಂಗವ್ವ ಬೆಳಗಾವಿ ಪ್ರಥಮ

Nagesh Talawar
ವೃಕ್ಷಥಾನ್ ಹೆರಿಟೇಜ್: ಗಂಗವ್ವ ಬೆಳಗಾವಿ ಪ್ರಥಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ನಗರದಲ್ಲಿ ಭಾನುವಾರ ನಡೆದ ವೃಕ್ಷಥನ್  ಹರಿಟೇಜ್(Vrukshathon Heritage Run) ಓದಲ್ಲಿ 60 ವಯಸ್ಸಿನ ಓಟಗಾರರ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳವಳ್ಳಿಯ ಗಂಗವ್ವ ಬೆಳಗಾವಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಸುಮಾರು 73 ವರ್ಷದ ಗಂಗವ್ವ 34 ನಿಮಿಷದಲ್ಲಿ 5 ಕಿಲೋ ಮೀಟರ್ ಓಟವನ್ನು ಪಿನಿಶಿಂಗ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಹಿಂದೆಯೂ ಹಲವು ಮ್ಯಾರಥಾನ್ ಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಯುವಕರು ನಾಚುವಂತೆ ಮಾಡಿದ್ದಾರೆ.

ಪ್ರಥಮ ಸ್ಥಾನ ಪಡೆದ ಗಂಗವ್ವ ಬೆಳಗಾವಿಯವರಿಗೆ ವಿಧಾನಸಭೆ ಸಭಾಪತಿ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್, ಸೇರಿದಂತೆ ಇತರೆ ಗಣ್ಯರು ಚೆಕ್ ನೀಡುವ ಮೂಲಕ ಶುಭ ಕೋರಿದರು. ಇಳಿವಯಸ್ಸಿನಲ್ಲಿಯೂ ದೂರ ಊರಿನಿಂದ ಬಂದು ಇಲ್ಲಿ ಭಾಗವಹಿಸುವ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article