ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ವಿಪಕ್ಷಗಳ ಗದ್ದಲದ ನಡುವೆ ಬುಧವಾರ ಸಂಸತ್ ಕಲಾಪದಲ್ಲಿ ವಕ್ಫ್ ತಿದ್ದುಪಡಿ ಮಸೂಸದೆಯನ್ನು ಮಂಡಿಸಲಾಯಿತು. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸಿದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರವಾಗಿ ಖಂಡಿಸಿದವು. ಈ ಸರ್ಕಾರ ಅಲ್ಪಸಂಖ್ಯಾತರನ್ನು ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದರು.
ಮಸೂದೆ ಕುರಿತು ಎಲ್ಲ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿ ಸಂಸದೀಯ ಸಮಿತಿಯಲ್ಲಿ ಚರ್ಚಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಕಿರಣ್ ರಿಜಿಜು ಸಮರ್ಥಿಸಿಕೊಂಡರು. ಒಬ್ಬ ವ್ಯಕ್ತಿ 5 ವರ್ಷಗಳ ಕಾಲ ಇಸ್ಲಾಂ ಧರ್ಮ ಪಾಲಿಸಿದ್ದರೆ ಮಾತ್ರ ಆಸ್ತಿಯನ್ನು ವಕ್ಫ್ ಮಾಡಲು ಅರ್ಹರು. ನಮ್ಮ ಸರ್ಕಾರ ವಕ್ಫ್ ಮಸೂದೆ ಮಂಡಿಸಿದೆ ಹೋದರೆ ಸಂಸತ್ ಭವನದ ಜಾಗ ಸಹ ವಕ್ಫ್ ಜಾಗವೆಂದು ಹೇಳುವ ಸಾಧ್ಯತೆ ಇತ್ತು ಎಂದು ಸಚಿವ ಕಿರಣ್ ರಿಜಿಜು ಹೇಳಿದರು.
ವಕ್ಫ್ ಮಸೂದೆಯನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಮಸೂದೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು. ಸಂಕೀರ್ಣತೆ ಪರಿಹರಿಸಲು ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿಲು ಪ್ರಯತ್ನಿಸಲಾಗುತ್ತಿದೆ. ಮತ ಬ್ಯಾಂಕ್ ರಾಜಕೀಯಕ್ಕಾಗಿ 70 ವರ್ಷಗಳಿಂದ ಮುಸ್ಲಿಂರನ್ನು ದಾರಿ ತಪ್ಪಿಸಲಾಯಿತು. ವಕ್ಫ್ ಆಸ್ತಿಯನ್ನು ಬಡ ಮುಸ್ಲಿಂರು ಬಳಸಬೇಕು. ಇದನ್ನು ಸಾಧಿಸಲು ಮಸೂದೆ ಮಂಡಿಸಲಾಯಿತು ಎಂದು ಹೇಳಿದರು.