ಪ್ರಜಾಸ್ತ್ರ ಸುದ್ದಿ
ನವದೆಹಲಿ(Ned delhi): ವಕ್ಫ್(Waqf board) ತಿದ್ದುಪಡಿ ಮಸೂದೆ-2024 ಅನ್ನು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು(kiran rijiju) ಅವರು ಲೋಕಸಭೆಯಲ್ಲಿ(lok sabha) ಗುರುವಾರ ಮಂಡಿಸಿದರು. ಈ ಮೂಲಕ 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಎನ್ ಡಿಎ ಮೈತ್ರಿಕೂಟದ ಸರ್ಕಾರ ಇಂದು ಮಂಡಿಸಿತು. ಇದನ್ನು ವಿಪಕ್ಷಗಳು ವಿರೋಧಿಸಿವೆ. ಸಂವಿಧಾನದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಕರಡು ಕಾನೂನು ಮುಸ್ಲಿಂ(Muslim) ಸಮುದಾಯಗಳಲ್ಲಿ ಶಿಯಾಗಳು, ಸುನ್ನಿಗಳ, ಬೋಹ್ರಾಗಳು, ಅಗಾಖಾನಿಗಳು ಹಾಗೂ ಇತರರೆ ಹಿಂದುಳಿದ ಪ್ರಾತಿನಿಧ್ಯ ನೀಡಲಿದೆ. ರಾಜ್ಯ ವಕ್ಫ್ ಬೋರ್ಡ್ ಗಳ ಅಧಿಕಾರಗಳು, ವಕ್ಫ್ ಆಸ್ತಿ ನೋಂದಣಿ ಹಾಗೂ ಸಮೀಕ್ಷೆ, ಅತಿಕ್ರಮ ತೆರವುಗೊಳಿಸುವ ಸಂಬಂಧ ಸಮಸ್ಯೆಗಳನ್ನು ಪರಿಹರಿಸಲು ಮಸೂದೆಯು ಸಹಾಯವಾಗುತ್ತೆ ಎಂದು ಹೇಳಲಾಗುತ್ತಿದೆ.