ಪ್ರಜಾಸ್ತ್ರ ಸುದ್ದಿ
ಬರೇಲಿ(Bareli): ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದನ್ನು ಅಖಿಲ ಭಾರ ಮುಸ್ಲಿಂ ಜಮಾತ್ ಸ್ವಾಗತಿಸಿದೆ. ಜಮಾತ್ ಅಧ್ಯಕ್ಷ ಶಹಾಬುದ್ದೀನ್ ರಜ್ವಿ ಬರೆಲ್ವಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬರಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂರಿಗೆ ಒಳ್ಳೆಯದಾಗುತ್ತೆ ಅಂತಾ ಹೇಳಿದ್ದಾರೆ.
ಬಡವರು, ಆರ್ಥಿಕವಾಗಿ ಹಿಂದುಳಿದವರು, ಅನಾಥರನ್ನು ರಕ್ಷಿಸುವುದು ವಕ್ಫ್ ಉದ್ದೇಶ. ಅದರ ಮೂಲ ಉದ್ದೇಶ ಮರೆತು ಕೆಲವರು ಲಾಭ ಮಾಡಿಕೊಳ್ಳುತ್ತಿದ್ದರು. ಅದರಿಂದ ಬರುವ ಆದಾಯವನ್ನು ಪಡೆದುಕೊಳ್ಳುತ್ತಿದ್ದರು.