ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪ್ರಸ್ತುತ ದೇಶದಲ್ಲಿ ಕದನದ ವಾತಾವರಣವಿದೆ. ಭಾರತ ಹಾಗೂ ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಪಾಕ್ ಇದನ್ನು ಉಲ್ಲಂಘಿಸುತ್ತಿದೆ. ಇದರ ನಡುವೆ ಸೈಬರ್ ದಾಳಿ ಬಗ್ಗೆ ಎಚ್ಚರಿಕೆ ವಹಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಅಪರಿಚಿತ ಲಿಂಕ್ ಹಾಗೂ ಇ-ಮೇಲ್ ಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ.
ಎಪಿಕೆ ಫೈಲ್ಸ್, ಎಕ್ಸ್ ಕ್ಲೂಸಿವ್ ನ್ಯೂಸ್ ಲಿಂಕ್, ಫಾರ್ವಡ್ ಲಿಂಕ್, ವಾಟ್ಸಪ್ ಸೆಕ್ಯೂರಿಟಿ ಅಪ್ ಡೇಟ್ ಮಾಡಿಕೊಳ್ಳುವಂತೆ ಬರುವ ಸಂದೇಶ ಸೇರಿದಂತೆ ಯಾವುದೇ ರೀತಿಯ ಹೊಸ ಅಪ್ಲಿಕೇಷನ್ ಗಳ ಬಗ್ಗೆ ಆಗಲಿ ಗಮನ ಹರಿಸುವಂತೆ ತಿಳಿಸಲಾಗಿದೆ. ಇತ್ತೀಚೆಗೆ ಪಾಕಿಸ್ತಾನದ ನಂಬರ್ ನಿಂದ ಯುವಕನೊಬ್ಬನಿಗೆ ಮೆಸೇಜ್ ಬಂದಿರುವುದನ್ನು ಇನ್ನು ಸ್ಮರಿಸಿಕೊಳ್ಳಬಹುದು.