ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಕ್ಕಳ ಪೋರ್ನ್ ವಿಡಿಯೋ ನೋಡುವುದು, ಡೌನ್ ಲೋಡ್ ಮಾಡಿಕೊಳ್ಳುವುದು ಅಪರಾಧವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಪೋಕ್ಸೋ ಕಾಯ್ದೆ ಅಡಿಯಲ್ಲಿ ಇದು ಅಪರಾಧವಾಗಿದೆ ಎಂದು ಆದೇಶ ನೀಡಿದೆ. ಮದ್ರಾಸ್ ಹೈಕೋರ್ಟ್, ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು, ಡೌನ್ ಲೋಡ್ ಮಾಡಿಕೊಳ್ಳುವುದು ಪೋಕ್ಸೋ(POCSO) ಕಾಯ್ದೆ ಅಡಿ ಅಪರಾಧವಲ್ಲವೆಂದು ತೀರ್ಪು ನೀಡಿತ್ತು.
ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ(Supreme Court) ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ಅವರಿದ್ದ ಪೀಠ ತಳ್ಳಿ ಹಾಕಿದೆ. ಇದರಲ್ಲಿ ದೊಡ್ಡ ದೋಷವನ್ನು ಎಸಗಲಾಗಿದೆ ಎಂದು ಹೇಳಿದೆ. ಇನ್ನು ಮಕ್ಕಳ ಪೋರ್ನ್(Child pornographic) ವಿಡಿಯೋ ನೋಡುವುದು, ಡೌನ್ ಲೋಡ್ ಮಾಡಿಕೊಳ್ಳುವುದು ಅಪರಾಧ ಎಂದಾದರೆ, ಇದರಲ್ಲಿ ಮಕ್ಕಳನ್ನು ಬಳಸಿಕೊಳ್ಳುವವರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತೀರಿ. ಮೊದಲು ಬುಡದಿಂದ ಕಿತ್ತು ಹಾಕಬೇಕು ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ. ಅಶ್ಲೀಲ ವಿಡಿಯೋಗಳಗೆ ಮಕ್ಕಳನ್ನು ಬಳಸಿಕೊಳ್ಳುವವರ ವಿರುದ್ಧ ತುಂಬಾ ಕಠಿಣ ಕಾನೂನು ಆಗಬೇಕು ಮತ್ತು ಅಂತಹ ಡಾರ್ಕ್ ವೆಬ್ ಸೈಟ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.