ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಜಿಲ್ಲೆಯ ಅಥಣಿ ಅಥಣಿ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 140 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ತಾಲೂಕಿನ 9 ಕೆರೆಗಳು ತುಂಬಿವೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಯಲ್ಲಮ್ಮವಾಡಿ ಜಾಕ್ ವೆಲ್ ಕಂ ಪಂಪ್ ಹೌಸ್ ಹಾಗೂ ಬಾಡಗಿ ಕೆರೆಗಳಿಗೆ ಭೇಟಿ ನೀಡಿದರು.
ಇನ್ನು ಕೋಹಳ್ಳಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ರೈತರಿಂದ ಗೌರವ ಸ್ವೀಕರಿಸಿದರು. ಇನ್ನು ಮುಂದೆ ಕೂಡಾ ಪೂರ್ವ ಭಾಗಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅತಿ ಹೆಚ್ಚಿನ ಯೋಜನೆಗಳನ್ನು ಮಂಜೂರು ಮಾಡಿಸುತ್ತೇನೆಂದು ರೈತರಿಗೆ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.




