ಪ್ರಜಾಸ್ತ್ರ ಸುದ್ದಿ
ವಯನಾಡು(Wayand): ಕೇರಳದ ವಯನಾಡು ಲೋಕಸಭಾ(Loka Sabha) ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಈಗಾಗ್ಲೇ ಮತ ಎಣಿಕೆ ಕಾರ್ಯ ನಡೆದಿದೆ. ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಕಣದಲ್ಲಿದ್ದಾರೆ. ಇದೆ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದು, ಮೊದಲ ಸ್ಪರ್ಧೆಯಲ್ಲಿಯೇ ಗೆಲುವು ಸಾಧಿಸುತ್ತಾರ ಎನ್ನುವ ಕುತೂಹಲವಿದೆ. ಬಿಜೆಪಿ, ಎನ್ ಡಿಎ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್, ಸಿಪಿಐ(ಎಂ), ಎಲ್ ಡಿಎಫ್ ನ ಮೈತ್ರಿ ಅಭ್ಯರ್ಥಿ ಸತ್ಯನ್ ಮೊಕೇರಿ ನಡುವೆ ತ್ರಿಕೋನ ಸ್ಪರ್ಧೆಯಿದೆ.
ಪ್ರಿಯಾಂಕಾ ಗಾಂಧಿ ಈಗಾಗ್ಲೇ 57 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೇ ಟ್ರೆಂಡ್ ಮುಂದುವರೆದರೆ ಗೆಲುವು ಪಕ್ಕಾ ಆಗಲಿದೆ. ವಯನಾಡು ಕಾಂಗ್ರೆಸ್ ಭದ್ರಕೋಟೆಯಾಗಿದೆ. ರಯಬರೇಲಿ ಕ್ಷೇತ್ರ ಉಳಿಸಿಕೊಂಡು ವಯನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ(Rahul Gandhi) ರಾಜೀನಾಮೆ ಕೊಟ್ಟಿದ್ದರಿಂದ ಉಪ ಚುನಾವಣೆ(By Poll) ನಡೆಯಿತು. 3.5 ಲಕ್ಷ ಮತಗಳ ಅಂತರದಿಂದ ರಾಹುಲ್ ಗಾಂಧಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅಣ್ಣನ ಕ್ಷೇತ್ರವನ್ನು ತಂಗಿ ಉಳಿಸಿಕೊಳ್ಳುತ್ತಾರ ಎನ್ನುವ ಕುತೂಹಲವಿದೆ.