ಪ್ರಜಾಸ್ತ್ರ ಸುದ್ದಿ
ವಯನಾಡ್(Wanad): ಭಾರೀ ಭೂಕುಸಿತದಿಂದಾಗಿ 400ಕ್ಕೂ ಹೆಚ್ಚು ಜನರು ಸಾವು, ಸಾವಿರಾರು ಜನರ ನೋವು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಹೊಂದಿದ ಕೇರಳದ ವಾಯನಾಡಿಗೆ ಶನಿವಾರ ಪ್ರಧಾನಿ ಮೋದಿ(Modi) ವೈಮಾನಿಕ ಸಮೀಕ್ಷೆ ನಡೆಸಿದರು. ಉತ್ತರ ಕೇರಳದ ವಿಪತ್ತು ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಕೇರಳ ಸಿಎಂ ಪಿಣರಾಯನ್ ವಿಜಯನ್ ಸಾಥ್ ನೀಡಿದರು.
ಚೂರಲ್ ಮಲಾ, ಪುಂಚಿರಿಮಟ್ಟಂ, ಮುಂಡಕ್ಕೈ ಭಾಗದಲ್ಲಿ ಸಮೀಕ್ಷೆ(Aerial survey) ನಡೆಸಲಾಯಿತು. ಬಳಿಕ ಎಸ್ ಕೆಎಂಜೆ ಹೈಕರ್ ಸೆಕೆಂಡರಿ ಶಾಲೆ ಬಂದಿಳಿದ ಅವರು ರಸ್ತೆ ಮಾರ್ಗದ ಮೂಲಕ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದರು. ಕೇಂದ್ರ ಸರ್ಕಾರಕ್ಕೆ ಕೇರಳ 2 ಸಾವಿರ ಕೋಟಿ ನೆರವು ಕೇಳಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಒತ್ತಾಯಿಸಿದ್ದು ಸಮೀಕ್ಷೆ ಬಳಿಕ ಪ್ರಧಾನಿ ಮೋದಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತಿಳಿಯಲಿದೆ.