ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೇರಳದ ವಯನಾಡ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಯನಾಡ್ ನಿಧಿ ಸಂಗ್ರಹಕನಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ತೆರಿಗೆದಾರರ 10 ಕೋಟಿ ಹಣವನ್ನು ವಯನಾಡ್ ಗೆ ವೇಗವಾಗಿ ಬಿಡುಗಡೆ ಮಾಡಿದ್ದೀರಿ. ಭೂಕುಸಿತ ನಡೆದ ವಯನಾಡ್ ನಲ್ಲಿ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದೀರಿ. ಆನೆ ದಾಳಿಯಿಂದ ಮೃತಪಟ್ಟ ಅಲ್ಲಿನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿದ್ದೀರಿ. ಈಗ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬಳಿಸಿಕೊಂಡು ಪ್ರಿಯಾಂಕ್ ಗಾಂಧಿ ಕ್ಷೇತ್ರವಾದ ವಾಯನಾಡ್ ಪ್ರವಾಸೋದ್ಯಮ ಪ್ರಚಾರ ಮಾಡುತ್ತಿದ್ದೀರಿ.
ಉತ್ತರ ಕರ್ನಾಟಕದ ರೈತರು ನರಳುತ್ತಿದ್ದಾರೆ. ಮನೆಗಳು ಕೊಚ್ಚಿಕೊಂಡು ಹೋಗಿವೆ. 12.5 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. ಪರಿಹಾರ ನೀಡುವುದು ಬಿಟ್ಟು ಸಮೀಕ್ಷೆ, ಕಡತ, ಭಾಷಣಕ್ಕೆ ಸಮೀತವಾಗಿದೆ. ನಮ್ಮದೆ ರಾಜ್ಯದ ರೈತರಿಗೆ ಪರಿಹಾರ ನೀಡುವ ಬದಲು ಮತ್ತೊಂದು ರಾಜ್ಯಕ್ಕೆ ನೀಡಿದ್ದೀರಿ. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಓಲೈಕೆ ಮಾಡುವ, ನಕಲಿ ಗಾಂಧಿ ಕುಟುಂಬಕ್ಕೆ ಮಣಿಯುವ ಮುಖ್ಯಮಂತ್ರಿ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.




