ಪ್ರಜಾಸ್ತ್ರ ಸುದ್ದಿ
ವಾಯನಾಡ್(Wayanad): ಕೇರಳದ ವಾಯನಾಡ್ ಜಿಲ್ಲೆಯಲ್ಲಿ ಕಳೆದ ಜುಲೈ 30ರಂದು ನಡೆದ ಭಾರೀ ಭೂಕುಸಿತದಿಂದಾಗಿ ಇದುವರೆಗೂ 300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 350ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇಂದಿಗೂ ರಕ್ಷಣಾ ಕಾರ್ಯ, ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತದೇಹಗಳ ಪತ್ತೆ ಕಾರ್ಯ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಗೆ ಗುರುವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಹಾಗೂ ಸಹೋದರಿ, ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi vadra) ಭೇಟಿ ನೀಡಿದ್ದರು.
ಇದೊಂದು ರಾಷ್ಟ್ರೀಯ ದುರಂತ. ಈ ಬಗ್ಗೆ ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಬೇಕು. ಕಾಂಗ್ರೆಸ್ ನಿಂದ 100 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. 2019ರಿಂದ 24ರ ತನಕ ವಾಯನಾಡ್ ಸಂಸದರಾಗಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿಯೂ ಗೆಲುವು ದಾಖಲಿಸಿದ್ದರು. ರಾಯ್ ಬರೇಲಿ ಕ್ಷೇತ್ರ ಉಳಿಸಿಕೊಂಡು ವಾಯನಾಡ್ ಬಿಟ್ಟುಕೊಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಖಚಿತವಾಗಿದೆ.