ಪ್ರಜಾಸ್ತ್ರ ಸುದ್ದಿ
ವಯನಾಡು(Wayanad): ಕೇರಳದ ವಾಯನಾಡು(Wayanad) ಜಿಲ್ಲೆಯ ಮೇಪ್ಪಾಡಿ, ಚೂರಲ್ ಮಲ, ಮುಂಡಕೈ ಪ್ರದೇಶದಲ್ಲಿ ಭೂಕುಸಿತ(Landslide) ದಾರುಣದಲ್ಲಿ 219 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 94 ಮೃತದೇಹಗಳನ್ನು ಸಂಬಂಧಿಕರು ಗುರುತಿಸಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ. ಇನ್ನು 91 ಮಂದಿಯ ಮೃತದೇಹದ ಇತರರ ಭಾಗಗಳು ಮಾತ್ರ ಇದ್ದವು, ಒಂದು ಮೃತದೇಹ ಹೆಣ್ಣಿನದೊ, ಗಂಡಿನದೊ ಅನ್ನೋದು ಇನ್ನು ಪತ್ತೆಯಾಗಿಲ್ಲವಂತೆ.
221 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 91 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 130 ಜನರನ್ನು ಬೇರೆ ಬೇರೆ ಕಾಳಜಿ ಕೇಂದ್ರಗಳಿಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್(pinarayi vijayan) ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಪ್ರತಿಯೊಂದು ಮಾಹಿತಿ ಪಡೆದರು. ಸಂತ್ರಸ್ತರ ರಕ್ಷಣೆ, ನೆರವು ಕುರಿತು ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.