ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್(Washington): ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ(Quad Summit) ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಈ ವೇಳೆ ಹಾಟ್ ಮೈಕ್ ನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಾವು ಒಟ್ಟಿಗೆ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ. ನಾವು ಯಾರ ಪರವೂ ಅಲ್ಲ ವಿರುದ್ಧವೂ ಅಲ್ಲ ಎಂದಿದ್ದಾರೆ. ಕ್ವಾಡ್ ದೇಶಗಳು ಸಕಾರಾತ್ಮಕವಾಗಿ ಉಪಕ್ರಮಗಳನ್ನು ತೆಗೆದುಕೊಂಡಿವೆ. 2025ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆ ನಡೆಸುವ ಕುರಿತು ಹೇಳಿದರು.
ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ: ಅಮೆರಿಕ(USA) ಅಧ್ಯಕ್ಷ ಜೋ ಬೈಡನ್(Joe Biden) ಮಾತನಾಡಿ, ಚೀನಾ ಕ್ವಾಡ್ ದೇಶಗಳನ್ನು ಪರೀಕ್ಷಿಸುತ್ತಿದೆ. ಅಲ್ಲಿನ ಅಧ್ಯಕ್ಷ ರಾಜತಾಂತ್ರಿಕ ಅವಕಾಶಗಳನ್ನೇ ಖರೀದಿಸಲು ನೋಡುತ್ತಿದ್ದಾರೆ. ತಮ್ಮ ದೇಶದ ದೃಷ್ಟಿಯಿಂದ ಆಕ್ರಮಣಕಾರಿ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದಿದ್ದಾರೆ. ಇಂಡೋ-ಫೆಸಿಪಿಕ್ ಭಾಗದಲ್ಲಿ ನಮ್ಮನ್ನು ಆರ್ಥಿಕತೆ, ತಂತ್ರಜ್ಞಾನ ಸೇರಿ ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಿದೆ ಅಂತಾ ಹೇಳಿದ್ದಾರೆ.
ಭಾರತಕ್ಕೆ 297 ಪುರಾತನ ವಸ್ತುಗಳು ವಾಪಸ್: ಭಾರತದ ಪುರಾತನ ವಸ್ತುಗಳು ಕಳ್ಳತನ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಅಮೆರಿಕ ಸೇರಿದ್ದ 297 ಪುರಾತನ ವಸ್ತುಗಳು ವಾಪಸ್ ಬರುತ್ತಿವೆ. ಈ ಬಗ್ಗೆ ಅಮೆರಿಕ-ಭಾರತ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಕುರಿತು ಪ್ರಧಾನಿ ಮೋದಿ(Modi) ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಮೆರಿಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.