ಪ್ರಜಾಸ್ತ್ರ ಸುದ್ದಿ
ಟೆಹರಾನ್(Tehran): ಇರಾನ್ ಸೇನೆಯನ್ನು ನಾಶ ಮಾಡಿದ್ದೇವೆ. ಸಧ್ಯದಲ್ಲೇ ಯುದ್ಧ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಪ್ರತಿಕ್ರಿಯೆ ನೀಡಿದೆ. ಯುದ್ಧ ಮುಗಿಸುವ ತೀರ್ಮಾನ ನಾವು ಮಾಡುತ್ತೇವೆ ಎಂದು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸನ್ ಬ್ರಿಗೇಡಿಯರ್ ಜನರಲ್ ಹಾಗೂ ವಕ್ತಾರ ಅಲಿ ಮೊಹಮ್ಮದ್ ನೈನಿ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಬಂದ್ ಮಾಡುವ ಮೂಲಕ ಜಾಗತಿಕ ತೈಲ ಸರಬರಾಜಿಗೆ ತೊಂದರೆ ಕೊಟ್ಟರೆ ಇರಾನ್ ಮೇಲೆ ಈಗ ಮಾಡಿರುವ ದಾಳಿಗಿಂತ 20 ಪಟ್ಟು ಹೆಚ್ಚಿನ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಟ್ರಂಪ್ ಸೋಮವಾರ ಹೇಳಿದ್ದರು. ಇನ್ನು ಈ ಯುದ್ಧ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಟ್ರಂಪ್ ಜೊತೆಗೆ ದೂರವಾಣಿ ಮೂಲಕ ಮಾತುಕತಡೆ ನಡೆಸಿದ್ದಾರಂತೆ.




