ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikamagaloru): ಸ್ವಇಚ್ಛೆಯಿಂದ 6 ನಕ್ಸಲರು ಬುಧವಾರ ಮುಂಜಾನೆಗೆ ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದಾರೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ. ನಾಳೆ ಮುಂಜಾನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದರ ಪ್ರಕ್ರಿಯೆಗಳು ನಡೆಯಲಿವೆ. ನಕ್ಸಲ ಶರಣಾಗತಿ ಹಾಗೂ ಪುನರ್ವಸತಿ ಮೂಲಕ ಮುಖ್ಯ ವಾಹಿನಿಗೆ ಬಂದು ಹಿಂಸೆಯ ಹಾದಿ ಬಿಡಲು ಸಜ್ಜಾಗಿದ್ದಾರೆ.
ಸುಂದರಿ ಕುತ್ಲೂರು, ಮುಂಡಗಾರು ಲತಾ(ದಕ್ಷಿಣ ಕನ್ನಡ), ಮಾರೆಪ್ಪ ಅರೋಲಿ, ವನಜಾಕ್ಷಿ ಬಾಳೆಹೊಳೆ(ಆಂಧ್ರ ಪ್ರದೇಶ), ಟಿ.ಎನ್ ಜೀಶ್(ಕೇರಳ) ಹಾಗೂ ಕೆ.ವಸಂತ(ತಮಿಳುನಾಡು) ಈ 6 ಜನರು ಮುಖ್ಯವಾಹಿನಿಗೆ ಬರಲಿದ್ದಾರೆ. ಸರ್ಕಾರದ ವತಿಯಿಂದ ಬರಹಗಾರ ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ರಚನೆ ಮಾಡಿದೆ. ನಕ್ಸಲ್ ಗುಂಪು ಹಾಗೂ ಸಮಿತಿಯ ನಡುವೆ ಮಾತುಕತೆ ನಡೆದು ಎಲ್ಲರೂ ಒಪ್ಪಿಕೊಂಡು ಮುಖ್ಯವಾಹಿನಿಗೆ ಬರುತ್ತಿದ್ದಾರೆ.